ಬುಧವಾರ, ನವೆಂಬರ್ 25, 2020
26 °C
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ಕೋವಿಡ್‌ 19 ಲಸಿಕೆ ಸಂಶೋಧನೆಗೆ ₹900 ಕೋಟಿ ಅನುದಾನ: ನಿರ್ಮಲಾ ಸೀತಾರಾಮನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕೋವಿಡ್‌ 19‘ ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಗೆ ₹900 ಕೋಟಿ ಅನುದಾನ ನೀಡುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ.

‘ಲಸಿಕೆಯ ಮೂಲ ವೆಚ್ಚ ಮತ್ತು ವಿತರಣೆಗೆ ಬೇಕಾದ ನಿಜವಾದ ವೆಚ್ಚವನ್ನು ಈ ಅನುದಾನವು ಒಳಗೊಂಡಿರುವುದಿಲ್ಲ. ಲಸಿಕೆ ಲಭ್ಯವಾಗುವ ವೇಳೆಗೆ, ಅದಕ್ಕೆ ಪ್ರತ್ಯೇಕವಾಗಿ ಹಣ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ದೇಸೀಯ ರಕ್ಷಣಾ ಉಪಕರಣಗಳು, ಕೈಗಾರಿಕಾ ಪ್ರೋತ್ಸಾಹ ಮತ್ತು ಮೂಲಸೌಕರ್ಯ ಮತ್ತು ಹಸಿರು ಇಂಧನಕ್ಕಾಗಿ ಬಂಡವಾಳ ಮತ್ತು ಕೈಗಾರಿಕಾ ವೆಚ್ಚಗಳಿಗೆ ₹10,200 ಕೋಟಿ ಹೆಚ್ಚುವರಿ ಬಜೆಟ್ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು