ಮಂಗಳವಾರ, ಮಾರ್ಚ್ 9, 2021
31 °C

ಚೆನ್ನೈ ವಿಮಾನ ನಿಲ್ದಾಣದಲ್ಲಿ ₹1.75 ಕೋಟಿ ಮೌಲ್ಯದ ಚಿನ್ನ ವಶ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ‘ಇಲ್ಲಿನ ವಿಮಾನ ನಿಲ್ದಾಣದಲ್ಲಿ ₹1.75 ಕೋಟಿ ಮೌಲ್ಯದ 3.46 ಕೆ.ಜಿ.ಚಿನ್ನ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ದುಬೈಯಿಂದ ಬಂದಿದ್ದ ಐವರು ಪ್ರಯಾಣಿಕರನ್ನು ಬಂಧಿಸಲಾಗಿದೆ’ ಎಂದು ಕಸ್ಟಮ್ಸ್‌ ಇಲಾಖೆ ಭಾನುವಾರ ತಿಳಿಸಿದೆ.

‘ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಐವರು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರು ತಮ್ಮ ಗುದ ನಾಳ ಹಾಗೂ ಪ್ಯಾಂಟ್‌ನ ಜೇಬಿನಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದರು. ಅವರಿಂದ 75 ಸಿಗರೇಟ್‌ ಪ್ಯಾಕೆಟ್‌, ಲ್ಯಾಪ್‌ಟಾಪ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಕಸ್ಟಮ್ಸ್‌ ಇಲಾಖೆಯ ಕಮಿಷನರ್‌ ರಾಜನ್‌ ಚೌಧರಿ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು