ನವದೆಹಲಿ:₹ 20,000 ಕೋಟಿ ವೆಚ್ಚದಲ್ಲಿ, ಮಿಲಿಟರಿ ಸಾಗಣೆಯ 56 ವಿಮಾನಗಳ (ಸಿ–295) ಖರೀದಿಗಾಗಿ ರಕ್ಷಣಾ ಸಚಿವಾಲಯವು ಸ್ಪೇನ್ ಮೂಲದ ಕಂಪನಿ ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಜೊತೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ವಾಯುಪಡೆ ಈಗ ಅವ್ರೊ–748 ವಿಮಾನಗಳನ್ನು ಬಳಸುತ್ತಿದೆ. ಇವುಗಳನ್ನು ಬದಲಾಯಿಸಲು 9 ವರ್ಷಗಳ ಹಿಂದೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.

ಭದ್ರತೆ ಮೇಲಿನ ಸಂಪುಟ ಸಮಿತಿಯು ಸಿ–295 ವಿಮಾನಗಳ ಖರೀದಿಗೆ ಎರಡು ವಾರಗಳ ಹಿಂದೆಯೇ ಒಪ್ಪಿಗೆ ನೀಡಿತ್ತು. ಈಗ ಇದು ಕಾರ್ಯರೂಪಕ್ಕೆ ಬಂದಂತಾಗಿದೆ.

‘ಒಪ್ಪಂದದಂತೆ, 16 ವಿಮಾನಗಳನ್ನು ನಾಲ್ಕು ವರ್ಷಗಳ ಒಳಗಾಗಿ ಕಂಪನಿಯು ಪೂರೈಸಲಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ.ಭರತಭೂಷಣ್ ಬಾಬು ಹೇಳಿದ್ದಾರೆ.

‘ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜಂಟಿಯಾಗಿ ಉಳಿದ 40 ವಿಮಾನಗಳನ್ನು ಭಾರತದಲ್ಲಿಯೇ ನಿರ್ಮಿಸಲಿವೆ. 10 ವರ್ಷಗಳ ಒಳಗಾಗಿ ಈ ವಿಮಾನಗಳನ್ನು ಪೂರೈಕೆ ಮಾಡಲಿವೆ’ ಎಂದೂ ಅವರು ಹೇಳಿದ್ದಾರೆ.

ಸಿ–295 ಎಂಡಬ್ಲ್ಯೂ ವಿಮಾನಗಳು 5–10 ಟನ್ ಭಾರದ ಸರಕು ಸಾಗಿಸುವ ಸಾಮರ್ಥ್ಯ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.