ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ ಬಾರ್‌ಹೋತಿ ಬಳಿ ಗಡಿ ಉಲ್ಲಂಘಿಸಿದ್ದ ಚೀನಾ ಸೇನೆ: ವರದಿ

Last Updated 29 ಸೆಪ್ಟೆಂಬರ್ 2021, 2:49 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಬಾರ್‌ಹೋತಿ ಸೆಕ್ಟರ್ ಬಳಿ ಚೀನಾದ ‘ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)’ ಕಳೆದ ತಿಂಗಳು ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಉಲ್ಲಂಘಿಸಿ ಭಾರತದ ಭೂ ಪ್ರದೇಶದೊಳಗೆ ಪ್ರವೇಶಿಸಿತ್ತು ಎಂದು ಮೂಲಗಳು ಹೇಳಿವೆ.

ಆಗಸ್ಟ್ 30ರಂದು ಚೀನಾ ಯೋಧರು ಗಡಿ ಉಲ್ಲಂಘಿಸಿ ಭಾರತದೊಳಕ್ಕೆ ಬಂದಿದ್ದರು. ಕೆಲವು ಗಂಟೆಗಳ ಕಾಲ ಅಲ್ಲಿ ತಂಗಿದ್ದ ಅವರು ಬಳಿಕ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಸದ್ಯ ಆ ಪ್ರದೇಶದಲ್ಲಿ ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ನಿಯೋಜನೆ ಮಾಡಲಾಗಿದೆ. ಐಟಿಬಿಪಿ ಸಿಬ್ಬಂದಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾರ್‌ಹೋತಿ ಪ್ರದೇಶದಲ್ಲಿ ಸಣ್ಣಮಟ್ಟಿನ ಗಡಿ ಉಲ್ಲಂಘನೆ ಆಗಾಗ ನಡೆಯುತ್ತಿರುತ್ತವೆ. ಎರಡೂ ಕಡೆಯ ಯೋಧರು ಎಲ್‌ಎಸಿ ಬಗ್ಗೆ ಭಿನ್ನ ಗ್ರಹಿಕೆಗಳನ್ನು ಹೊಂದಿರುವುದೇ ಇದಕ್ಕೆ ಕಾರಣ ಎಂದೂ ಮೂಲಗಳು ಹೇಳಿವೆ.

ಪೂರ್ವ ಲಡಾಖ್‌ನ ಕೆಲವು ದುರ್ಗಮ ಪ್ರದೇಶಗಳಲ್ಲಿ ಚೀನಾ ಸೇನೆಯು ಗೌಪ್ಯವಾಗಿ ತಂಗುದಾಣಗಳನ್ನು ನಿರ್ಮಿಸಿಕೊಳ್ಳುತ್ತಿದೆ ಎಂದು ಮಂಗಳವಾರ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT