ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022–23ರಲ್ಲಿ ₹15,920 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ ಭಾರತ

ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ ರಕ್ಷಣಾ ರಫ್ತು
Last Updated 1 ಏಪ್ರಿಲ್ 2023, 4:59 IST
ಅಕ್ಷರ ಗಾತ್ರ

ನವದೆಹಲಿ: 2022–23ನೇ ಹಣಕಾಸು ವರ್ಷದಲ್ಲಿ ಭಾರತವು ₹ 15,920 ಕೋಟಿ ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ತು ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

‘2022–2023ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ದಾಖಲೆಯಾದ ₹ 15,920 ಕೋಟಿಗೆ ತಲುಪಿದೆ. ಇದು ದೇಶದ ಗಮನಾರ್ಹ ಸಾಧನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ರಕ್ಷಣಾ ರಫ್ತು ಬೆಳೆಯುತ್ತಲೇ ಇರುತ್ತದೆ‘ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

2021-22 ರಲ್ಲಿ ₹ 12,814 ಕೋಟಿ ಮೌಲ್ಯದ ರಕ್ಷಣಾ ಪರಿಕರಗಳು ರಫ್ತಾಗಿದ್ದರೆ, 2020–21ರಲ್ಲಿ ಇದರ ಪ್ರಮಾಣ ₹ 8,434 ಕೋಟಿ ಇತ್ತು. 2019–20 ರಲ್ಲಿ ₹ 9,115 ಕೋಟಿ ಮೌಲ್ಯದಷ್ಟು ರಫ್ತಾಗಿದ್ದರೆ, 2018-19ರಲ್ಲಿ ₹ 10,745 ಕೋಟಿ ಮೌಲ್ಯದಷ್ಟು ರಕ್ಷಣಾ ‍ಪರಿಕರಗಳನ್ನು ಭಾರತ ಮಾರಾಟ ಮಾಡಿತ್ತು.

2024–25ರ ವೇಳೆಗೆ ₹ 1,75,000 ಕೋಟಿಯ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಹಾಗೂ ₹ 35,000 ಕೋಟಿಯಷ್ಟು ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT