ಮಂಗಳವಾರ, ಜನವರಿ 25, 2022
28 °C

Covid India Update| 37,379 ಹೊಸ ಪ್ರಕರಣ ಪತ್ತೆ: ಪಾಸಿಟಿವಿಟಿ ದರ ಶೇ 3.24ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶ 37,379 ಹೊಸ ಕೋವಿಡ್‌ ಪ್ರಕರಣಗಳನ್ನು ಕಂಡಿದೆ. ಇದೇ ವೇಳೆ 124 ಮಂದಿ ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಮೂಲಕ ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 3.49 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ 3.43 ಕೋಟಿ ಮಂದಿ ಚೇತರಿಸಿಕೊಂಡಿದ್ದರೆ, ಒಟ್ಟು 4,82,017 ಮಂದಿ ಮೃತಪಟ್ಟಿದ್ದಾರೆ.

ಸದ್ಯ ದೇಶದಲ್ಲಿ 1,71,830 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ 3.24% ಕ್ಕೆ ತಲುಪಿದೆ.

ಭಾರತದಲ್ಲಿ ಸೋಮವಾರ 33,750 ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು.

ದೇಶದಲ್ಲಿ ಈ ವರೆಗೆ 1,46,70,18,464 ಡೋಸ್‌ ಲಸಿಕೆಗಳನ್ನು ನೀಡಲಾಗಿದೆ. 

ಇನ್ನು ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕಿನ ಸಂಖ್ಯೆ 1892ಕ್ಕೆ ಏರಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು