ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ದೇಶದಲ್ಲಿ 39,796 ಹೊಸ ಪ್ರಕರಣಗಳು, 723 ಮಂದಿ ಸಾವು

ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಸೋಮವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 39,796 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 723 ಮಂದಿ ಸಾವಿಗೀಡಾಗಿದ್ದಾರೆ ಮತ್ತು 42,352 ಮಂದಿ ಗುಣಮುಖರಾಗಿದ್ದಾರೆ.

ಪ್ರಸ್ತುತ ದೇಶದಲ್ಲಿ ಒಟ್ಟು ಪ್ರಕರಣಗಳ ಶೇ.1.59ರಷ್ಟು, 4,82,071 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 3,05,85,229 ಕೋವಿಡ್‌ ಪ್ರಕರಣಗಳ ಪೈಕಿ 2,97,00,430 ಜನರು ಚೇತರಿಸಿಕೊಂಡಿದ್ದು, 4,02,728 ಮಂದಿ ಮೃತಪಟ್ಟಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಪ್‌ಡೇಟ್‌ನಿಂದ ತಿಳಿದು ಬಂದಿದೆ.

ಭಾನುವಾರ ದಾಖಲಾದ ಪ್ರಕರಣಗಳಿಗಿಂತ 3,275 ಕಡಿಮೆ ಪ್ರಕರಣಗಳು ಸೋಮವಾರ 24 ಗಂಟೆಗಳಲ್ಲಿ ವರದಿಯಾಗಿದೆ.

ದೇಶದಾದ್ಯಂತ 35,28,92,046 ಡೋಸ್‌ಗಳಷ್ಟು ಕೋವಿಡ್‌–19 ಲಸಿಕೆ ಹಾಕಲಾಗಿದೆ. ಐಸಿಎಂಆರ್‌ ಪ್ರಕಾರ, ಕಳೆದ 24 ಗಂಟೆಗಳಲ್ಲಿ 15,22,504 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT