ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ಷಾಮ: ಜಾಗತಿಕ ಪಟ್ಟಿಯಲ್ಲಿ ಬೆಂಗಳೂರು ಸೇರಿ ಭಾರತದ 30 ನಗರಗಳು

Last Updated 2 ನವೆಂಬರ್ 2020, 11:35 IST
ಅಕ್ಷರ ಗಾತ್ರ

ನವದೆಹಲಿ: ನೀರಿನ ಅಭಾವಎದುರಿಸುತ್ತಿರುವ ನಗರಗಳಜಾಗತಿಕ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರು ಮಹಾನಗರ ಸ್ಥಾನ ಪಡೆದಿದ್ದು ನೂರು ನಗರಗಳ ಪಟ್ಟಿಯಲ್ಲಿ ಭಾರತದ 30 ನಗರಗಳು ಸೇರಿವೆ ಎಂದು ವರದಿಯಾಗಿದೆ.

ಭೂಮಿ ಬಿಸಿಯಾಗುವುದನ್ನು ತಡೆಯಲು ಅಗತ್ಯ ತುರ್ತುಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಬ್ಲ್ಯೂಡಬ್ಲ್ಯೂಎಫ್‌ ಸಂಸ್ಥೆ ವರದಿ ಮಾಡಿದೆ.ಡಬ್ಲ್ಯೂಡಬ್ಲ್ಯೂಎಫ್ಸಂಸ್ಥೆ ಜಾಗತಿಕ ತಾಪಮಾನ ಹಾಗೂ ಜಲಕ್ಷಾಮ ಕುರಿತು ಅಧ್ಯಯನ ಮಾಡುವ ಸಂಸ್ಥೆಯಾಗಿದೆ.

2050ರ ವೆಳಗೆ ನೀರಿನ ಅಭಾವ ಎದುರಿಸುತ್ತಿರುವ ನಗರಗಳ ಸಂಖ್ಯೆ ಶೇ 51ಕ್ಕೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನೀರಿನ ಅಭಾವ ಎದುರಿಸುತ್ತಿರುವ ನೂರು ನಗರಗಳ ಜಾಗತಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರು ಸೇರಿದಂತೆ ಭಾರತದ 30 ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಚೀನಾ ಸೇರಿದಂತೆ, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ದೇಶಗಳ ನಗರಗಳು ನೀರಿನ ಆಹಾಕಾರದ ಹಾಟ್ ಸ್ಪಾಟ್‌ಗಳಾಗಿವೆ. ಬೀಜಿಂಗ್, ಜಕಾರ್ತಾ, ಜೋಹಾನ್ಸ್ ಬರ್ಗ್, ಇಸ್ತಾಂಬುಲ್, ಹಾಂಗ್ ಕಾಂಗ್, ಮೆಕ್ಕಾ ಮತ್ತು ರಿಯೊ ಡಿ ಜನೈರೊ ನಗರಗಳನ್ನು ಜಾಗತಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.

ಜೈಪುರ, ಇಂದೋರ್, ಅಮೃತಸರ, ಪುಣೆ, ಶ್ರೀನಗರ, ಕೋಲ್ಕತ್ತಾ, ಬೆಂಗಳೂರು, ಮುಂಬೈ, ಕೋಝಿಕೋಡ್ ಮತ್ತು ವಿಶಾಖಪಟ್ಟಣಂ ಸೇರಿದಂತೆ ಸುಮಾರು 30 ಭಾರತೀಯ ನಗರಗಳನ್ನು ಗುರುತಿಸಲಾಗಿದೆ. ಇಲ್ಲಿ ಮುಂದಿನ ಕೆಲವು ದಶಕಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಕಾರ್ಯಕ್ರಮ ನಿರ್ದೇಶಕ ಡಾ.ಸೆಜಲ್ ವೋರಾ ಅವರು, ‘ಭಾರತದ ಪರಿಸರದ ಭವಿಷ್ಯ ಅಲ್ಲಿನ ನಗರಗಳಲ್ಲಿಅಡಗಿದೆ. ಭಾರತ ವೇಗವಾಗಿ ನಗರೀಕರಣಕ್ಕೆ ಒಳಪಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗಬಹುದು. ಜಲಕ್ಷಾಮ ವಿಷವರ್ತುಲದಿಂದ ದೂರಸರಿಯಲು ನಗರಗಳಲ್ಲಿನ ಜಲಾನಯನ ಪ್ರದೇಶಗಳು ಮತ್ತಷ್ಟು ವಿಸ್ತಾರವಾಗಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT