ಮುಂಬೈ: ಮುಂಬೈಯ ಬೀದಿಯಲ್ಲಿ ಕಿರುಕುಳಕ್ಕೊಳಗಾದ ಸಂದರ್ಭದಲ್ಲಿ ತಮ್ಮ ರಕ್ಷಣೆಗೆ ಧಾವಿಸಿದ ಇಬ್ಬರು ಭಾರತೀಯ ಯುವಕರಿಗೆ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಧನ್ಯವಾದ ಸಲ್ಲಿಸಿದ್ದಾರೆ.

ಅಲ್ಲದೆ ಅವರನ್ನು ಭಾರತೀಯ ಹೀರೊಗಳು ಎಂದು ಶ್ಲಾಘಿಸಿದ್ದಾರೆ. ಬಳಿಕ ಯುವಕರೊಂದಿಗೆ ಆಹಾರ ಸೇವಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮುಂಬೈನ ಖಾರ್ ಪ್ರದೇಶದಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ವೇಳೆ ಕಿರುಕುಳಕ್ಕೊಳಗಾದ ಯುವತಿಯನ್ನು ಇಬ್ಬರು ಭಾರತೀಯರು ರಕ್ಷಿಸಿದ್ದರು.

ಇದನ್ನೂ ಓದಿ:ಮುಂಬೈಯ ಬೀದಿಯಲ್ಲಿ ಕೊರಿಯಾದ ಮಹಿಳಾ ಯೂಟ್ಯೂಬರ್ಗೆ ಕಿರುಕುಳ; ಇಬ್ಬರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್, ಮುಂಬೈ ಬೀದಿಯಲ್ಲಿ ಸಂಕಷ್ಟದಿಂದ ನನ್ನನ್ನು ರಕ್ಷಿಸಿದ ಹಾಗೂ ವಿಡಿಯೊವನ್ನು ಪೋಸ್ಟ್ ಮಾಡಲು ನೆರವಾದ ಇಬ್ಬರು ಭಾರತೀಯ ಜಂಟಲ್ಮ್ಯಾನ್ ಜೊತೆಗೆ ಆಹಾರವನ್ನು ಸೇವಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೇರೆ ದೇಶದಲ್ಲೂ ನನಗೆ ಈ ಅನುಭವ ಆಗಿತ್ತು: ದ.ಕೊರಿಯಾದ ಮಹಿಳಾ ಯೂಟ್ಯೂಬರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.