ಭಾನುವಾರ, ಜೂನ್ 26, 2022
29 °C

ಇಂದ್ರಾಣಿ ಮುಖರ್ಜಿ ಸೇರಿ ಜೈಲಿನ 39 ಕೈದಿಗಳಿಗೆ ಕೋವಿಡ್-19 ದೃಢ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಬೈಕಲಾದ ಮಹಿಳಾ ಕಾರಾಗೃಹದ 39 ಕೈದಿಗಳಿಗೆ ಕೋವಿಡ್‌ ದೃಢಪಟ್ಟಿದೆ.

‘ಈ ಜೈಲಿನ ಪೊಲೀಸರು ಮತ್ತು ಸಿಬ್ಬಂದಿಗೆ ಸೋಂಕು ತಗುಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕೆಲವು ಸೋಂಕಿತರನ್ನು ಜೆಜೆ ಆಸ್ಪತ್ರೆ, ಸಂತ ಜಾರ್ಜ್‌ ಆಸ್ಪತ್ರೆ ಮತ್ತು ಜಿಟಿ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಒಟ್ಟು 462 ಕೈದಿಗಳಿಗೆ (262 ಮಹಿಳೆಯರು ಮತ್ತು 200 ಪುರುಷರು) ನೆಲೆವೊದಗಿಸುವ ಸಾಮರ್ಥ್ಯವನ್ನು ಬೈಕುಲಾ ಕಾರಾಗೃಹ ಹೊಂದಿದೆ. ಆದರೆ ಪ್ರಸ್ತುತ ಈ ಜೈಲಿನಲ್ಲಿ 306 ಮಹಿಳಾ ಮತ್ತು 203 ಪುರುಷ ಕೈದಿಗಳು ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು