ಸೋಮವಾರ, ಅಕ್ಟೋಬರ್ 3, 2022
24 °C

ವಿಮಾನದಲ್ಲಿ ಸಿಗರೇಟು ಸೇದಿರುವ ದೇಹದಾರ್ಡ್ಯ ಪಟು ರಸ್ತೆಯಲ್ಲೇ ಮದ್ಯ ಸೇವಿಸಿದ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌:  ವಿಮಾನದಲ್ಲೇ ಸಿಗರೇಟು ಸೇದಿ ವಿವಾದಕ್ಕೆ ಗುರಿಯಾಗಿರುವ ದೇಹದಾರ್ಢ್ಯಪಟು ಬಾಬಿ ಕಟಾರಿಯಾ ಎಂಬಾತ ನಡುರಸ್ತೆಯಲ್ಲೇ ಮದ್ಯೆ ಕುಡಿದಿರುವುದೂ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ವಿಮಾನದಲ್ಲೇ ಸಿಗರೇಟ್‌ ಸೇದಿದ ದೇಹದಾರ್ಢ್ಯಪಟು: ತನಿಖೆಗೆ ಆದೇಶಿಸಿದ ಸಿಂಧಿಯಾ

ಉತ್ತರಾಖಂಡದ ರಸ್ತೆಯ ಮಧ್ಯದಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೊವನ್ನು ಬಾಬಿ ಕಟಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಡೆಹ್ರಾಡೂನ್‌ನ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ರಸ್ತೆಯಲ್ಲೇ ಆನಂದಿಸುವ ಸಮಯ’ ಎಂದು ತಮ್ಮ ವಿಡಿಯೊಗೆ ಬಾಬಿ ಅಡಿಬರಹವನ್ನೂ ನೀಡಿದ್ದರು. 

ದೇಹದಾರ್ಡ್ಯ ಪಟು ಬಾಬಿ ಕಟಾರಿಯಾ, ಸ್ಪೈಸ್‌ಜೆಟ್‌ ವಿಮಾನದಲ್ಲಿ ಧೂಮಪಾನ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ತನಿಖೆ ನಡೆಸುವಂತೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು