ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ಗೆ ಆರ್‌ಎಸ್‌ಎಸ್‌ ಹೋಲಿಸಿರುವುದು ಸಂಪೂರ್ಣ ತಪ್ಪು: ಶಿವಸೇನಾ

Last Updated 6 ಸೆಪ್ಟೆಂಬರ್ 2021, 8:29 IST
ಅಕ್ಷರ ಗಾತ್ರ

ಮುಂಬೈ: ಚಿತ್ರ ಸಾಹಿತಿ ಜಾವೇದ್‌ ಅಖ್ತರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ತಾಲಿಬಾನ್‌ಗೆ ಹೋಲಿಸಿರುವುದು ಸಂಪೂರ್ಣ ತಪ್ಪು ಎಂದು ಶಿವಸೇನಾ ಖಂಡಿಸಿದೆ.

'ತಾಲಿಬಾನಿಗಳು ಇಸ್ಲಾಮಿಕ್‌ ದೇಶವನ್ನು ಬಯಸಿದಂತೆ ಬಲಪಂಥೀಯರು ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ. ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ’ ಎಂದು ಆರ್‌ಎಸ್ಎಸ್‌ ಹೆಸರನ್ನು ಉಲ್ಲೇಖಿಸದೆ ಜಾವೇದ್‌ ಅಖ್ತರ್‌ ಅವರು ಸುದ್ದಿ ವಾಹಿನಿಯೊಂದಕ್ಕೆ ಈ ಹೇಳಿಕೆ ನೀಡಿದ್ದರು.

‘ಜಾವೇದ್‌ ಅಖ್ತರ್‌ ಜಾತ್ಯತೀತ ವ್ಯಕ್ತಿ. ಅವರು ಮೂಲಭೂತವಾದದ ವಿರುದ್ಧ ಮಾತನಾಡುತ್ತಾರೆ. ಹಾಗಿದ್ದರೂ, ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ಗೆ ಹೋಲಿಸಿರುವುದು ಸಂಪೂರ್ಣ ತಪ್ಪು. ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಬೆಂಬಲಿಸುವವರು ತಾಲಿಬಾನಿ ಮನಸ್ಥಿತಿಯನ್ನು ಹೊಂದಿದವರು ಎಂದು ನೀವು ಹೇಗೆ ಹೇಳುತ್ತೀರಿ? ನಾವು ಇದನ್ನು ಒಪ್ಪುವುದಿಲ್ಲ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಪಾಕಿಸ್ತಾನ ರಚನೆಗೆ ಕಾರಣವಾದ ವಿಭಜನೆಯು ಧರ್ಮ ಆಧಾರಿತವಾಗಿತ್ತು. ಹಿಂದೂ ರಾಷ್ಟ್ರವನ್ನು ಬೆಂಬಲಿಸುವವರು ಬಹುಸಂಖ್ಯಾತ ಹಿಂದೂಗಳನ್ನು ದೂರವಿಡಬಾರದು ಎಂಬುದನ್ನು ಮಾತ್ರ ಬಯಸುತ್ತಾರೆ’ ಎಂದು ಉಲ್ಲೇಖಿಸಲಾಗಿದೆ.

‘ಹಿಂದೂತ್ವ ಒಂದು ಸಂಸ್ಕೃತಿ. ಈ ಸಮುದಾಯದವರು ತಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುವವರನ್ನು ತಡೆಯುವ ಹಕ್ಕನ್ನು ಬಯಸುತ್ತಾರೆ. ಹಿಂದೂತ್ವವನ್ನು ತಾಲಿಬಾನ್‌ಗೆ ಹೋಲಿಸುವ ಮೂಲಕ ಹಿಂದೂ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.

‘ಇದು ಹಿಂದೂ ಬಹುಸಂಖ್ಯಾತ ದೇಶವಾಗಿದ್ದರೂ, ನಾವು ಜಾತ್ಯತೀತತೆಯ ತತ್ವವನ್ನು ಎತ್ತಿ ಹಿಡಿದಿದ್ದೇವೆ. ಹಿಂದೂತ್ವ ಪ್ರತಿಪಾದಕರು ಹಿಂದೂಗಳನ್ನು ಮೂಲೆಗುಂಪು ಮಾಡಬಾರದೆಂದು ಬಯಸುತ್ತಾರೆ. ನಿಮಗೆ ಆರ್‌ಎಸ್‌ಎಸ್‌ನೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಆ ಸಂಘಟನೆಯ ತತ್ವಗಳನ್ನು ತಾಲಿಬಾನ್‌ಗೆ ಹೋಲಿಸುವುದು ಸರಿಯಲ್ಲ’ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT