ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ಸರ್‌ ಪಟ್ಟಿಗೆ ರಂಗನತಿಟ್ಟು ಪಕ್ಷಿಧಾಮ

ದೇಶದ 10 ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ
Last Updated 4 ಆಗಸ್ಟ್ 2022, 12:56 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ 10 ಜೌಗು ಪ್ರದೇಶಗಳು ರಾಮ್‌ಸರ್ ಪಟ್ಟಿಗೆ ಸೇರ್ಪಡೆಯಾಗಿವೆ. ಈ ಮೂಲಕ ಇದಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಬುಧವಾರ ಪ್ರಕಟಿಸಿದೆ.

ಈ ಮೂಲಕ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿ ರುವ ಅತೀ ಹೆಚ್ಚು ಜೌಗು ಪ್ರದೇಶಗಳನ್ನು ಹೊಂದಿರುವ ಹೆಗ್ಗಳಿಕೆಗೆ ಭಾರತ ಹಾಗೂ ಚೀನಾ ದೇಶಗಳು ಪಾತ್ರವಾಗಿವೆ. ಭಾರತ ಹಾಗೂ ಚೀನಾದ 64 ಜೌಗು ಪ್ರದೇಶ ಗಳು ಈವರೆಗೆ ಈ ಪಟ್ಟಿಗೆ ಸೇರಿವೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ರಂಗನತಿಟ್ಟು ಪಕ್ಷಿಧಾಮ ದಲ್ಲಿ 188 ಪ್ರಭೇದದ ಮರಗಳು, 225 ಪ್ರಭೇದದ ಪಕ್ಷಿಗಳು, 69 ಜಾತಿಯ ಮೀನುಗಳು, 13 ಪ್ರಭೇ ದದ ಕಪ್ಪೆಗಳು ಹಾಗೂ 30 ಪ್ರಭೇದದ ಚಿಟ್ಟೆಗಳು ಇವೆ. ಇದು ಭಾರತದ ಪ್ರಮುಖ ಪಕ್ಷಿಧಾಮ ಎಂದು ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ ಈ ಹಿಂದೆ ಗುರುತಿಸಿತ್ತು. ರಂಗನತಿಟ್ಟು ಪಕ್ಷಿಧಾಮ, ಬಳ್ಳಾರಿಯ ಅಂಕಸಮುದ್ರ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡದ ಅಘನಾಶಿನಿ ಜೌಗುಪ್ರದೇಶಗಳನ್ನು ರಾಮ್‌ಸಾರ್ ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ಅರಣ್ಯ ಹಾಗೂ ಪರಿಸರ ಇಲಾಖೆಯು ಕೇಂದ್ರ ಅರಣ್ಯ ಇಲಾಖೆಗೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಕರಣ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಕಳೆದ ವಾರ ಪ್ರಮಾಣಪತ್ರ ಸಲ್ಲಿಸಿದ್ದ ಅರಣ್ಯ ಇಲಾಖೆ, ಈ ಜೌಗು ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲಿ ರಾಮ್‌ಸಾರ್‌ ಮಾನ್ಯತೆ ಸಿಗುವ ವಿಶ್ವಾಸ ಇದೆ’ ಎಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT