ಕೊಚ್ಚಿ (ಪಿಟಿಐ): ಮಹಿಳೆಯ ತೊಡೆಗಳನ್ನು ಜೋಡಿಸಿ, ಅದರ ಸಂಧಿಯಲ್ಲಿ ನಡೆಸುವ ಅಸಹಜ ಲೈಂಗಿಕ ಕ್ರಿಯೆಯು ಅತ್ಯಾಚಾರಕ್ಕೆ ಸಮನಾದದ್ದು ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.

ನೆರೆ ಮನೆಯ ಬಾಲಕಿಯ ಮೇಲೆ ದುರುದ್ದೇಶಪೂರಿತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ಅವರನ್ನೊಳಗೊಂಡ ಪೀಠ ಸೋಮವಾರ ಈ ಅಭಿಪ್ರಾಯ ವ್ಯಕ್ತಪಡಿಸಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಆದರೆ ಪ್ರತಿವಾದಿಗಳು ಸಂತಸ್ತೆಯು ಬಾಲಕಿ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹಾಗಾಗಿ ಈ ಪ್ರಕರಣ ಪೋಕ್ಸೊ ಕಾಯ್ದೆಯಡಿ ಬರುವುದಿಲ್ಲ ಎಂದು ಪೀಠ ತಿಳಿಸಿದೆ.

ಅದಾಗ್ಯೂ, ಅರ್ಜಿದಾರ ನಡೆಸಿರುವ ಲೈಂಗಿಕ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (1), 375 (ಸಿ) ವ್ಯಾಪ್ತಿಗೆ ಬರುವ ಅಪರಾಧಗಳಾಗಿವೆ ಎಂದು ಪೀಠ ಹೇಳಿದೆ.

ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವ ಇರುವ ತನಕ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಹೈಕೋರ್ಟ್ ಮಾರ್ಪಡಿಸಿದೆ.

ಅಲ್ಲದೆ ಸೆಷನ್ಸ್ ನ್ಯಾಯಾಲಯವು ಐಪಿಸಿ 354, 354ಎ (1) ಕೃತ್ಯಗಳಿಗೆ ಜಾರಿಗೊಳಿಸಿದ್ದ ಶಿಕ್ಷೆಗಳನ್ನು ಹೈಕೋರ್ಟ್ ದೃಢಪಡಿಸಿದೆ. ಈ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.