ಭಾನುವಾರ, ಫೆಬ್ರವರಿ 28, 2021
20 °C

'ಲಾ ನಿನಾ' ಪರಿಣಾಮ: 2020ರಲ್ಲಿ ಅಧಿಕ ಮಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2020ರಲ್ಲಿ ದೇಶದ ಹವಾಮಾನದ ಮೇಲೆ ಲಾ ನಿನಾ ಹೆಚ್ಚಿನ ಪರಿಣಾಮವನ್ನು ಬೀರಿದೆ. ಸತತ ಎರಡನೇ ವರ್ಷ ಸರಾಸರಿಗಿಂತ ಅಧಿಕ ಮಳೆಯಾಗಿದ್ದು, ಚಳಿಗಾಲದಲ್ಲಿ ಹೆಚ್ಚಿನ ಚಳಿಗೆ ಕಾರಣವಾಗಿದೆ. 

ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಐದು ಚಂಡಮಾರುತಗಳು ಸೃಷ್ಟಿಯಾಗಿದ್ದು, ಈ ಪೈಕಿ ನಾಲ್ಕು ಚಂಡಮಾರುತವು ತೀವ್ರ ಸ್ವರೂಪದ್ದಾಗಿದ್ದವು. ಉತ್ತರ ಭಾರತದ ಹಲವೆಡೆ ಉತ್ತಮ ಮಳೆಯಾಗಲು ಹಾಗೂ ಹೆಚ್ಚಿನ ಚಳಿಗೂ ಲಾ ನಿನಾ ಸ್ಥಿತಿಯು ಪ್ರಮುಖ ಪಾತ್ರ ವಹಿಸಿತ್ತು. ಜೊತೆಗೆ 2020ರ ಏಪ್ರಿಲ್‌–ಜೂನ್‌ ನಡುವೆ ಬಿಸಿಗಾಳಿಯ ಪ್ರಭಾವವೂ ಇಳಿಕೆಯಾಗಿತ್ತು. ಜೂನ್‌, ಆಗಸ್ಟ್‌ ಹಾಗೂ ಸಪ್ಟೆಂಬರ್‌ನಲ್ಲಿ ದೇಶದಲ್ಲಿ ಸರಾಸರಿಗಿಂತ ಅಧಿಕ ಮಳೆಯಾಗಿದ್ದು, ಜುಲೈನಲ್ಲಿ ಮಾತ್ರ ಮಳೆ ಪ್ರಮಾಣ ಇಳಿಕೆಯಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಎಂ.ಮೊಹಪಾತ್ರ ಹೇಳಿದರು.

‘19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿದ್ದು, 9 ರಾಜ್ಯಗಳಲ್ಲಿ ಸರಾಸರಿಗಿಂತ ಅಧಿಕ ಮಳೆಯಾಗಿದೆ. ಲಾ ನಿನಾ ಸ್ಥಿತಿಯು ಮುಂದಿನ ಆರು ತಿಂಗಳು ಇರಲಿದ್ದು, ಮುಂದಿನ ವರ್ಷ ಪೂರ್ತಿ ಹವಾಮಾನ ಹೇಗಿರಲಿದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಮೊಹಪಾತ್ರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು