ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ್–ಖೇರಿ ಹಿಂಸಾಚಾರ: ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಲಾಭ ಸಾಧ್ಯತೆ

Last Updated 7 ಅಕ್ಟೋಬರ್ 2021, 19:22 IST
ಅಕ್ಷರ ಗಾತ್ರ

ಲಖನೌ:ಲಖಿಂಪುರ್–ಖೇರಿ ಜಿಲ್ಲೆಯಲ್ಲಿ ನಾಲ್ವರು ರೈತರ ಹತ್ಯೆ ಹಾಗೂ ಹಿಂಸಾಚಾರ ಘಟನೆಯ ಬಳಿಕ ತಾನು ರೈತರ ಪರ ಎಂದು ಬಿಂಬಿಸಿಕೊಳ್ಳುವ ಅವಕಾಶವನ್ನು ಕಾಂಗ್ರೆಸ್, ಇತರ ವಿರೋಧ ಪಕ್ಷಗಳನ್ನು ಮೀರಿ ಬಳಸಿಕೊಂಡಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ತನ್ನ ಚುನಾವಣಾ ಭವಿಷ್ಯಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಲ್ಲಿ ಪಕ್ಷ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ ಈ ಬೆಳವಣಿಗೆಯು ಕಾಂಗ್ರೆಸ್‌ಗೆ ಉತ್ತರ ಪ್ರದೇಶಕ್ಕಿಂತ ಹೆಚ್ಚಾಗಿ ಗುಂಪುಗಾರಿಕೆ, ಬಂಡಾಯವನ್ನು ಎದುರಿಸುತ್ತಿರುವಪಂಜಾಬ್‌ನಲ್ಲಿ ಹೆಚ್ಚಿನ ಲಾಭವನ್ನು ತಂದುಕೊಡಬಹುದು ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿಕಾಂಗ್ರೆಸ್ ಸಾಂಸ್ಥಿಕ ನೆಲೆಯನ್ನು ಹೊಂದಿಲ್ಲ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಅದರ ಪ್ರಭಾವ ಸೀಮಿತವಾಗಿ ಇರುವುದರಿಂದ ಲಖಿಂಪುರ ಘಟನೆಯಿಂದ ಚುನಾವಣಾ ಲಾಭ ಪಡೆಯಲು ಪಕ್ಷಕ್ಕೆ ಕಷ್ಟವಾಗಬಹುದು ಎಂದು ಮತ್ತೊಬ್ಬ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಪಂಜಾಬ್ ಮುಖ್ಯಮಂತ್ರಿ ಚರಣಜಿತ್ಸಿಂಗ್ ಚನ್ನಿ ಅವರು ಲಖಿಂಪುರ್ ಖೇರಿಗೆ ಭೇಟಿ ನೀಡಿ, ಮೃತಪಟ್ಟ ನಾಲ್ವರು ರೈತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದರು. ಈ ಬೆಳವಣಿಗೆಯು ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲಖಿಂಪುರ್ ಖೇರಿ ಜಿಲ್ಲೆಯನ್ನು ಉತ್ತರ ಪ್ರದೇಶದ ‘ತರಾಯಿ’ ಪ್ರದೇಶ ಎಂದು ಕರೆಯಲಾಗುತ್ತದೆ.ಶಾಜಹಾನ್‌ಪುರ, ಪಿಲಿಭಿತ್, ಸೀತಾಪುರ ಮತ್ತು ಬಹರೈಚ್ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಲಖಿಂಪುರ ಖೇರಿ ಜಿಲ್ಲೆಯಲ್ಲಿಹೆಚ್ಚಿನ ಸಂಖ್ಯೆಯ ಸಿಖ್ ರೈತರು ಇರುವುದರಿಂದ ಇದು ಉತ್ತರ ಪ್ರದೇಶದ ಪುಟ್ಟ ಪಂಜಾಬ್ ಎಂದೇ ಪ್ರಸಿದ್ಧವಾಗಿದೆ.

ಪಂಜಾಬಿನ ಮಾಲ್ವಾ, ದೋಬಾ ಮತ್ತು ಮಾಝಾ ಪ್ರದೇಶಗಳಿಂದ ಬಂದ ಸಿಖ್ಖರು ಸರ್ಕಾರದ ಆಹ್ವಾನದ ಮೇರೆಗೆ ಸುಮಾರು ಐದಾರು ದಶಕಗಳ ಹಿಂದೆ ಈ ಭಾಗಕ್ಕೆ ವಲಸೆ ಬಂದಿದ್ದರು. ಬರಡು ಭೂಮಿಯನ್ನು ಕೃಷಿ ಹೊಲಗಳಾಗಿ ಪರಿವರ್ತಿಸಲು ಅವರನ್ನು ಆಹ್ವಾನಿಸಲಾಗಿತ್ತು. ಸೀತಾಪುರದಿಂದ ಪಿಲಿಭಿತ್ ಮತ್ತು ಬರೇಲಿಗೆ ಪ್ರಯಾಣಿಸುವಾಗ ಪಂಜಾಬಿಗಳ ತೋಟಗಳನ್ನು ನೋಡಬಹುದು. ಇಲ್ಲಿ ಹೆಚ್ಚಿನ ಸಂಖ್ಯೆಯ ಗುರುದ್ವಾರಗಳನ್ನು ಕೂಡ ನೋಡಬಹುದು.

ಈ ಭಾಗದಿಂದ ಬಂದ ಬಹುತೇಕ ರೈತರು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟ
ನೆಯ ಮುಂಚೂಣಿಯಲ್ಲಿದ್ಧಾರೆ.ರಾಜ್ಯದ ಪೂರ್ವ ಜಿಲ್ಲೆಗಳ ರೈತರು ‌ಪ್ರತಿಭಟನೆಯಲ್ಲಿ ಅಷ್ಟಾಗಿ ತೊಡಗಿಸಿಕೊಂಡಿಲ್ಲ.

ಅಜಯ್‌ ವಿರುದ್ಧ ಕೊಲೆ ಪ್ರಕರಣ: ತೀರ್ಪು ಇನ್ನಷ್ಟೇ ಬರಬೇಕಿದೆ

ಲಖನೌ:ಲಖಿಂಪುರ–ಖೇರಿ ಹಿಂಸಾಚಾರದಿಂದಾಗಿ ಸುದ್ದಿಯಲ್ಲಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು 17 ವರ್ಷ ಹಳೆಯದಾದ ಕೊಲೆ ಪ್ರಕರಣದಲ್ಲಿ ಖುಲಾಸೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಅಲಹಾಬಾದ್‌ ಹೈಕೋರ್ಟ್‌ ಇನ್ನಷ್ಟೇ ನೀಡಬೇಕಿದೆ.

ಲಖಿಂಪುರ–ಖೇರಿ ಜಿಲ್ಲೆಯ ತಿಕೋನಿಯಾ ಪ್ರದೇಶದಲ್ಲಿ ಪ್ರಭಾತ್‌ ಗುಪ್ತಾ ಎಂಬ 23 ವರ್ಷದ ಯುವಕನನ್ನು 2003ರಲ್ಲಿ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಅಜಯ್‌ ಅವರು ಆರೋಪಿ ಆಗಿದ್ದರು. ಆದರೆ, ಸಾಕ್ಷ್ಯಗಳಿಲ್ಲ ಎಂಬ ಕಾರಣಕ್ಕೆ 2004ರಲ್ಲಿ ಅಜಯ್‌ ಸೇರಿ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಮತ್ತು ಮೃತ ವ್ಯಕ್ತಿಯ ಕುಟುಂಬದವರು ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯ ವಿಚಾರಣೆ ನಡೆಸಿದ್ದ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠವು 2018ರ ಮಾರ್ಚ್‌ 12ರಂದು ತೀರ್ಪು ಕಾಯ್ದಿರಿಸಿತ್ತು.

ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್‌ ಉಪಾಧ್ಯಾಯ ಮತ್ತು ದಿನೇಶ್‌ ಕುಮಾರ್‌ ಸಿಂಗ್‌ ಅವರಿದ್ದ ಪೀಠವು ತೀರ್ಪು ನೀಡಲು ಮುಂದಾಗಿತ್ತು. ಆದರೆ, ಪ್ರಕರಣವನ್ನು ಮರು ವಿಚಾರಣೆಗೆ ಎತ್ತಿಕೊಳ್ಳಲಾಯಿತು. ನ್ಯಾಯಾಲಯದ ವೆಬ್‌ಸೈಟ್‌ ಮಾಹಿತಿ ಪ್ರಕಾರ, 2020ರ ಫೆಬ್ರುವರಿ 25ರಂದು ವಿಚಾರಣೆ ನಿಗದಿಯಾಗಿತ್ತು.

***

ಉತ್ತರ ಪ್ರದೇಶ ಮತ್ತು ಉತ್ತರಾಖಂಡಚುನಾವಣೆಯಲ್ಲಿ ಲಖಿಂಪುರಘಟನೆ ಮಹತ್ವದ ಪರಿಣಾಮ ಬೀರುವುದಿಲ್ಲ. ಇದು ಪಂಜಾಬ್‌ನಲ್ಲಿ ಹೆಚ್ಚು ಪ್ರತಿಧ್ವನಿಸಬಹುದು

-ಜೆ.ಪಿ. ಶುಕ್ಲಾ,ರಾಜಕೀಯ ವಿಶ್ಲೇಷಕ ಮತ್ತು ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT