ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಶಿವಸೇನಾ ಯಾವುದು ಎಂಬುದನ್ನು ಸಾಬೀತುಪಡಿಸಿದ ಶಿಂದೆಗೆ ಅಭಿನಂದನೆ: ಫಡಣವೀಸ್

Last Updated 6 ಅಕ್ಟೋಬರ್ 2022, 11:21 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ಅಭಿನಂದಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‍‘ಯಾರು ನಿಜವಾದ ಶಿವ ಸೈನಿಕರು (ಶಿವಸೇನಾ) ಎಂಬುದನ್ನು ಸಾಬೀತುಪಡಿಸಿದ ಸಿಎಂ ಏಕನಾಥ್ ಶಿಂದೆ ಅವರನ್ನು ಅಭಿನಂದಿಸುತ್ತೇನೆ. ರಾಜ್ಯದಾದ್ಯಂತ ಎಲ್ಲ ಭಾಗದ ಜನರು ದಸರಾ ರ‍್ಯಾಲಿಗೆ ಭಾಗವಹಿಸಿದ್ದರು. ಅದು ಶಿಂದೆ ಸ್ಥಾಪಿಸಿರುವ ನಿಜವಾದ ಶಿವಸೇನೆ ಎಂಬುದಕ್ಕೆ ಸಾಕ್ಷಿಯಾಗಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಸರ್ಕಾರ ರಚಿಸುತ್ತೇವೆ. ಅದು ಬಿಜೆಪಿ ಮತ್ತು ಸಿಎಂ ಶಿಂದೆ ನೇತೃತ್ವದ ನಿಜವಾದ ಶಿವಸೇನಾದಮೈತ್ರಿಕೂಟವಾಗಿರಲಿದೆ. ಆಗ ನೀವು (ಉದ್ಧವ್ ಠಾಕ್ರೆ) ವಿಧಾನಸಭೆಯಲ್ಲಿ ಕೇಸರಿ ಬಣ್ಣವನ್ನು ನೋಡುತ್ತೀರಿ’ ಎಂದು ದೇವೇಂದ್ರ ಫಡ್ನವಿಸ್ ಭವಿಷ್ಯ ನುಡಿದಿದ್ದಾರೆ.

ಬುಧವಾರ ದಸರಾ ರ‍್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಶಿಂದೆ, ‘ಶಿವಸೇನಾಎಂಬುದು ನಿಮ್ಮ (ಉದ್ಧವ್ ಠಾಕ್ರೆ) ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲ. ಶಿವಸೇನಾಎಂಬುದು ಶಿವ ಸೈನಿಕರದ್ದು, ಅದಕ್ಕಾಗಿ ತಮ್ಮ ಬೆವರು ಹರಿಸಿದ್ದಾರೆ. ಅಧಿಕಾರದ ಆಸೆಗಾಗಿ ಪಾಲುದಾರಿಕೆ ಮಾಡಿಕೊಳ್ಳುವಂತಹ ನಿಮ್ಮಂತವರದ್ದಲ್ಲ’ ಎಂದು ವಾಗ್ದಾಳಿ ನಡೆಸಿದ್ದರು.

ನನ್ನನ್ನು ‘ಕಟ್ಟಪ್ಪ’ ಎಂದು ಕರೆಯುತ್ತಾರೆ. ‘ಕಟ್ಟಪ್ಪ’ ಕೂಡ ಸ್ವಾಭಿಮಾನ ಹೊಂದಿದ್ದ ವ್ಯಕ್ತಿ. ನಿಮ್ಮಂತೆ ಡಬಲ್ ಸ್ಟಾಂಡರ್ಡ್ ವ್ಯಕ್ತಿ ಅಲ್ಲ ಎಂಬುದನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ ಎಂದು ಉದ್ಧವ್ ಹೇಳಿಕೆಗೆ ಶಿಂದೆ ತಿರುಗೇಟು ನೀಡಿದ್ದರು.

ಇದೇ ವೇಳೆ ಮಾತನಾಡಿದ್ದ ಶಿವಸೇನಾದಶಿಂದೆ ಬಣದ ನಾಯಕ ರಾಮದಾಸ್ ಕದಂ, ‘ಉದ್ಧವ್ ಜೀ, ನಿಮ್ಮ ಸಹೋದರ, ಸೋದರ ಸಂಬಂಧಿಗಳು ಅಥವಾ ರಾಜ್ ಠಾಕ್ರೆ ಕೂಡ ನಿಮ್ಮೊಂದಿಗೆ ಇಲ್ಲ. ನಿಮ್ಮ ಕುಟುಂಬದವರನ್ನೇಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ರಾಜ್ಯವನ್ನು ಹೇಗೆ ಉಳಿಸಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT