ಗುರುವಾರ , ಆಗಸ್ಟ್ 18, 2022
25 °C

ಉದ್ಧವ್‌ ಠಾಕ್ರೆ ಬೆನ್ನಿಗಿರಿದ ಮಾರ್ಮಿಕ ಫೋಟೊ ಹಂಚಿಕೊಂಡ ಸಂಜಯ್‌ ರಾವುತ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್‌ ಠಾಕ್ರೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಶಿವಸೇನಾದಿಂದ ಬಂಡಾಯವೆದ್ದು ಹೊರನಡೆದಿದ್ದ ಏಕನಾಥ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ಈ ಬೆಳವಣಿಗೆಗಳ ನಡುವೆಯೇ ಶಿವಸೇನಾ ನಾಯಕ ಸಂಜಯ್‌ ರಾವುತ್‌ ಅವರು ಏಕನಾಥ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ಟ್ವೀಟ್‌ ಮಾಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬೆನ್ನಿಗೆ ಚೂರಿ ಇರಿದ ಫೋಟೊವೊಂದನ್ನು ಸಂಜಯ್‌ ರಾವುತ್‌ ಹಂಚಿಕೊಂಡಿದ್ದಾರೆ. ‘ಇದು ನಿಜವಾಗಿ ಸಂಭವಿಸಿದ್ದು’ ಎಂಬ ಸಾಲನ್ನು ಫೋಟೊ ಜೊತೆ ಬರೆದುಕೊಂಡಿದ್ದಾರೆ. 

ಸಂಜಯ್‌ ರಾವುತ್‌ ಅವರು ಮಹಾ ವಿಕಾಸ್‌ ಆಘಾಡಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಿವಸೇನಾದ ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಾಗ ಉದ್ಧವ್‌ ಠಾಕ್ರೆ ಬೆನ್ನಿಗೆ ರಾವುತ್‌ ನಿಂತಿದ್ದರು.

ಶಿವಸೇನಾ ಮುಖವಾಣಿ ಸಾಮ್ನಾದ ಪ್ರಧಾನ ಸಂಪಾದಕರೂ ಆಗಿರುವ ಸಂಜಯ್‌ ರಾವುತ್‌, ರಾಜ್ಯಸಭಾ ಸದಸ್ಯರು ಆಗಿದ್ದಾರೆ.  
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು