ಮಂಗಳವಾರ, ಅಕ್ಟೋಬರ್ 26, 2021
20 °C

ಲಖಿಂಪುರ ಪ್ರಕರಣ: ಸಿಜೆಐ ಕುರಿತು ತಪ್ಪು ಮಾಹಿತಿ; ಸುಪ್ರೀಂ ಕೋರ್ಟ್ ಅಸಮಾಧಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಖಿಂಪುರ–ಖೇರಿ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌. ವಿ. ರಮಣ ಅವರು ಭೇಟಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಮಾಡಿದ್ದ ಟ್ವೀಟ್‌ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮಾಧ್ಯಮ ಮತ್ತು ಅದರ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಗೌರವಿಸುತ್ತದೆ ಆದರೆ ‘ಈ ಕೃತ್ಯ ಸರಿಯಲ್ಲ’ ಎಂದು ಕೋರ್ಟ್ ಶುಕ್ರವಾರ ಹೇಳಿದೆ.

ಲಖಿಂಪುರ ಖೇರಿ ಹಿಂಸಾಚಾರ ಮೊಕದ್ದಮೆ ಕುರಿತು ವಿಚಾರಣೆ ನಡೆಸುವ ವೇಳೆ ಕೋರ್ಟ್‌ ಈ ಪ್ರಕರಣ ಕುರಿತು ವಿಶೇಷ ಉಲ್ಲೇಖ ಮಾಡಿದೆ. ‘ಯಾರೊ ಒಬ್ಬರು ವಾಕ್‌ ಸ್ವಾತಂತ್ರ್ಯದ ಮೇರೆಯನ್ನು ಮೀರಿರುವುದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕೆ ನಾವು ವಿಷಾದಿಸುತ್ತೇವೆ. ತಪ್ಪು ಚಿತ್ರಣವನ್ನು ನೀಡಲಾಗಿದೆ. ಅವರು ನಿಜಾಂಶವನ್ನು ಪರಿಶೀಲಿಸಬೇಕು’ ಎಂದು ಎನ್‌. ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿದೆ.

ಸಂತ್ರಸ್ತರ ಕುಟುಂಬಗಳನ್ನು ಸಿಜೆಐ ಅವರು ಭೇಟಿಯಾಗಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ಟ್ವೀಟ್‌ ಮಾಡಿದೆ ಎಂದು ವಕೀಲರೊಬ್ಬರು ಗುರುವಾರ ಪೀಠಕ್ಕೆ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು