ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೊಂದು ಸರ್ಕಾರಿ ಉದ್ಯೋಗ: ಕೇರಳದ ಗ್ರಾಮ ಪಂಚಾಯತಿಯೊಂದರ ಹೊಸ ಯೋಜನೆ

Last Updated 7 ಜೂನ್ 2021, 15:02 IST
ಅಕ್ಷರ ಗಾತ್ರ

ತಿರುವನಂತಪುರ: ಕೊರೊನಾ ಸಾಂಕ್ರಾಮಿಕ ರೋಗವು ಹಲವು ಮಂದಿ ಉದ್ಯೋಗ ಆಕಾಂಕ್ಷಿಗಳ ಭರವಸೆಯನ್ನು ಮುರುಟಿ ಹಾಕಿರುವಾಗ, ಕೇರಳದಲ್ಲಿ ಗ್ರಾಮ ಪಂಚಾಯಿತಿಯೊಂದು ಆನ್‌ಲೈನ್ ಕೋಚಿಂಗ್ ನೀಡುವ ಮೂಲಕ ಪ್ರತಿ ಮನೆಯ ಕನಿಷ್ಠ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಖಾತ್ರಿಪಡಿಸುವ ಹೊಸ ಯೋಜನೆ ಆರಂಭಿಸಿದೆ.

ಕೇರಳದ ಆಲಪ್ಪುಳ ಕರಾವಳಿ ಪ್ರದೇಶಗಳಲ್ಲಿನ ಕಾಂಜಿಕುಳಿ ಪಂಚಾಯಿತಿ ‘ಕಾಂಜಿಕುಳಿ ಮಿಷನ್’ ಪ್ರಾರಂಭಿಸಿದೆ. ಈ ಪಂಚಾಯಿತಿಯು ಸುಮಾರು 9,000 ಮನೆಗಳನ್ನು ಹೊಂದಿದೆ. ಹೆಚ್ಚಿನ ಕುಟುಂಬಗಳು ಕೃಷಿ ಮತ್ತು ನಾರು ಚಟುವಟಿಕೆಗಳಲ್ಲಿ ತೊಡಗಿವೆ. ಹಳ್ಳಿಯಲ್ಲಿರುವ ಉದ್ಯೋಗ ಆಕಾಂಕ್ಷಿಗಳು ಈ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿದ್ದರೂ, ಕೋವಿಡ್‌ ಮಾರ್ಗಸೂಚಿ ನಿರ್ಬಂಧಗಳಿಂದಾಗಿ ತರಗತಿಗಳ ಮೇಲೆ ಪರಿಣಾಮ ಬೀರುತ್ತಿದೆ.

ಪ್ರತಿ ಮನೆಯಲ್ಲಿ ಒಬ್ಬರನ್ನು ಸರ್ಕಾರಿ ನೌಕರನ್ನಾಗಿಸುವ ಗುರಿಯನ್ನು ಐದು ವರ್ಷಗಳಲ್ಲಿ ತಲುಪುವ ಯೋಜನೆ ಪಂಚಾಯಿತಿಯದು. ನಿವೃತ್ತ ಸರ್ಕಾರಿ ನೌಕರರು ಮತ್ತು ಕೋಚಿಂಗ್ ನೀಡಲು ಸಿದ್ಧರಿರುವ ಸ್ವಯಂಸೇವಕರ ಬೆಂಬಲದೊಂದಿಗೆ ಯೋಜನೆಯನ್ನು ಪಂಚಾಯಿತಿ ಅಧಿಕಾರಿಗಳು ಆರಂಭಿಸಿದ್ದಾರೆ. ಈ ಯೋಜನೆಗಾಗಿ ₹10 ಲಕ್ಷ ವಿನಿಯೋಗಿಸಲಾಗುತ್ತಿದೆ. ಕೇರಳದ ಮಾಜಿ ಹಣಕಾಸು ಸಚಿವ ಹಾಗೂಆಲಪ್ಪುಳ ಮಾಜಿ ಶಾಸಕ ಥಾಮಸ್ ಐಸಾಕ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

ಈಗಾಗಲೇ 1,500 ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್ ತರಬೇತಿಗೆ ಸೇರಿದ್ದಾರೆ.ಇದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಸೂಕ್ತವಾಗಿದೆ.ಪಂಚಾಯಿತಿಯಲ್ಲಿರುವ ಎಂಜಿನಿಯರಿಂಗ್‌ ಪದವೀಧರರು ಈ ಯೋಜನೆಗೆ ಆನ್‌ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ತರಬೇತಿಯ ನಿರಂತರ ಪರಿಶೀಲನೆಗಾಗಿ 11 ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನೂ ರಚಿಸಲಾಗಿದೆ ಎಂದು ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ನಿವೃತ್ತ ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ತಂಡವು 100 ಪ್ರಶ್ನಾವಳಿಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದೆ. ಪ್ರಶ್ನಾವಳಿಗಳ ಮೂರು ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಉದ್ಯೋಗ ಆಕಾಂಕ್ಷಿಗಳಿಗೆ ಕಳುಹಿಸಲಾಗುವುದು. ಆನ್‌ಲೈನ್ ಅಣಕು ಪರೀಕ್ಷೆಗಳನ್ನು ನಡೆಸಲಾಗುವುದು. ಉತ್ತಮ ಅಂಕ ಪಡೆದವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT