ಬುಧವಾರ, ಅಕ್ಟೋಬರ್ 5, 2022
27 °C

ಈಗ ಚುನಾವಣೆ ನಡೆದರೂ ಎನ್‌ಡಿಎಗೆ ಸರಳ ಬಹುಮತ: ಸಮೀಕ್ಷೆಯಲ್ಲಿ ಬಹಿರಂಗ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವು ಭಾರತದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸರಳ ಬಹುಮತ ಪಡೆಯುವ ಸಾಧ್ಯತೆಗಳಿವೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಆದರೆ, ಪ್ರಧಾನಿ ಮೋದಿ  ದೇಶವನ್ನು ಮುನ್ನಡೆಸಬಲ್ಲ ಅತ್ಯಂತ ಜನಪ್ರಿಯ ನಾಯಕರಾಗಿಯೇ ಉಳಿದಿದ್ದಾರೆ. 

‘ಈಗ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿ ಕೂಟವು 286 ಸ್ಥಾನಗಳನ್ನು ಗೆಲ್ಲುತ್ತದೆ. ಇತ್ತೀಚೆಗೆ ಎನ್‌ಡಿಎಯಿಂದ ಪ್ರಮುಖ ಪಕ್ಷಗಳು ನಿರ್ಗಮಿಸಿರುವುದರಿಂದಾಗಿ ಹಿಂದಿನ 307 ಸ್ಥಾನಗಳಿಗಿಂತಲೂ ಸುಮಾರು 21 ಸ್ಥಾನಗಳು ಎನ್‌ಡಿಎಗೆ ನಷ್ಟವಾಗಬಹುದು’ ಎಂದು ಮಾಧ್ಯಮ ಸಂಸ್ಥೆ ‘ಇಂಡಿಯಾ ಟುಡೇ’ ಸಿ-ವೋಟರ್ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. 

ಒಟ್ಟು 543 ಸದಸ್ಯಬಲದ ಲೋಕಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 300ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಹೊಂದಿದೆ. 

ಫೆಬ್ರುವರಿ ಮತ್ತು ಆಗಸ್ಟ್ ನಡುವೆ 122,016 ಜನರನ್ನು ಸಂಪರ್ಕಿಸಿ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯನ್ನು ನಡೆಸಲಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಎನ್‌ಡಿಎಯಿಂದ ಹೊರಬರುವುದಕ್ಕೂ ಮೊದಲೇ ಬಹುಪಾಲು ಸಮೀಕ್ಷೆ ನಡೆಸಲಾಗಿತ್ತು. ಆದರೆ, ಅವರ ನಿರ್ಗಮನದ ನಂತರದ ಒಂದು ದಿನದಲ್ಲಿ ನಡೆದ ಸಮೀಕ್ಷೆಯಲ್ಲಿ, ಎನ್‌ಡಿಎಗೆ ಹಿನ್ನಡೆ ಕಂಡು ಬಂದಿದೆ. 

ಎಂಟು ವರ್ಷಗಳಿಗೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿದ್ದರೂ, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದರೂ, ಕೋವಿಡ್ -19 ಅಲೆ ದೇಶವನ್ನು ಬಾಧಿಸಿದರೂ ಮೋದಿ ಅವರ ಜನಪ್ರಿಯತೆ ಮಸುಕಾಗಿಲ್ಲ ಎಂಬದೂ ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆಗೆ, ಶೇ 53  ರಷ್ಟು ಮಂದಿ ಮೋದಿ ಅವರತ್ತಲೇ ಒಲವು ತೋರಿದ್ದಾರೆ. ಕೇವಲ ಶೇ 9ರಷ್ಟು ಜನರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಬೆಂಬಲಿಸಿದ್ದಾರೆ. ಶೇ 7ರಷ್ಟು ಜನರು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಪರವಾಗಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು