ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸ್ತ್ರೀ ಚಿತ್ರ, ಆದರೂ ಕೆಲ ಮಹಿಳೆಯರಿಗೆ ಇಷ್ಟವಾಗಿಲ್ಲ!

Last Updated 11 ಆಗಸ್ಟ್ 2020, 11:43 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಪ್ರಮುಖ ರಸ್ತೆ ತಿರುವುಗಳಲ್ಲಿರುವ ಸಿಗ್ನಲ್‌ ದೀಪಗಳಲ್ಲಿದ್ದ ಪುರುಷನ ಚಿತ್ರವನ್ನು ತೆಗೆದು ಸ್ತ್ರೀ ಚಿತ್ರವಿರುವ ದೀಪಗಳನ್ನು ಅಳವಡಿಸಿದ್ದಾರೆ.

ಭಾರತದ ಅತಿದೊಡ್ಡ ನಗರದಲ್ಲಿ ಕಳೆದ ವಾರ 240 ಪಾದಚಾರಿ ಸಂಕೇತಗಳನ್ನು ಬದಲಿಸಿದ್ದು, ಪುರುಷರ ಚಿತ್ರಗಳಿದ್ದ ಸಿಗ್ನಲ್‌ಗಳಲ್ಲಿ ಸ್ತ್ರೀ ಚಿತ್ರಗಳಿರುವ ಸಂಕೇತಗಳೊಂದಿಗೆ ದಾದರ್‌ನ ನೆರೆಹೊರೆಯ ರಸ್ತೆಯ ಉದ್ದಕ್ಕೂ ಬದಲಾಯಿಸಲಾಗಿದೆ. ಇಂತಹ ಸಂಕೇತಗಳನ್ನು ಸ್ಥಾಪಿಸಿದ ದೇಶದ ಮೊದಲ ನಗರ ಎನ್ನುವ ಕೀರ್ತಿಗೆ ಮುಂಬೈ ಪಾತ್ರವಾಗಿದ್ದು, ಈ ಕ್ರಮವು ಮಹಿಳೆಯರ ಸಬಲೀಕರಣದ ಬದ್ಧತೆಯನ್ನು ಪ್ರತಿನಿಧಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಸರ್ಕಾರವು ಸರಳ ಆಲೋಚನೆಯೊಂದಿಗೆ ಲಿಂಗ ಸಮಾನತೆಯನ್ನು ಖಾತರಿಪಡಿಸುತ್ತಿದೆ. ಈಗ ಈ ಸಂಕೇತಗಳಲ್ಲಿ ಮಹಿಳೆಯರೂ ಇದ್ದಾರೆ' ಎಂದು ಮಹಾರಾಷ್ಟ್ರ ರಾಜ್ಯದ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಬರೆದುಕೊಂಡಿದ್ದಾರೆ.

ಆದರೆ ವಿಮರ್ಶಕರು ಈ ಕ್ರಮವನ್ನು ಮೇಲ್ನೋಟಕ್ಕೆ ಟೋಕನ್ ಎಂದು ಕರೆದಿದ್ದು, ಅದು ಭಾರತದಲ್ಲಿ ಲಿಂಗ ಅಸಮಾನತೆಯ ಸಮಸ್ಯೆಗಳನ್ನು ಬಗೆಹರಿಸಲು ಅಲ್ಪಸ್ವಲ್ಪ ನೆರವಾಗುತ್ತದೆ. ದೇಶದಲ್ಲಿ ಮಹಿಳೆಯರು ಬಲಿಷ್ಠ ಸ್ಥಾನಗಳನ್ನು ಪಡೆದಿದ್ದಾರೆ. ಅದರಂತೆ ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿಯಾದರು.ಸಾರ್ವಜನಿಕವಾಗಿ ಮಹಿಳೆಯರ ಮೇಲಿನ ಉನ್ನತ ಮಟ್ಟದ ದೌರ್ಜನ್ಯದ ನಿದರ್ಶನಗಳಿಂದಾಗಿ ಕತ್ತಲಾದ ನಂತರ ಒಬ್ಬಂಟಿಯಾಗಿ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಮತ್ತು ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ನಿಂದನೆ ಮತ್ತು ಲೈಂಗಿಕ ದೌರ್ಜನ್ಯವು ಮಹಿಳೆಯರು ಮತ್ತು ಯುವತಿಯರ ಮೇಲಿನ ಸಾಮಾನ್ಯ ಅಪರಾಧಗಳಾಗಿವೆ.

ಭಾರತದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ದೇಶದ ಪ್ರತಿ 100 ಬಾಲಕರಿಗೆ ಕೇವಲ 73 ಬಾಲಕಿಯರು ಮಾತ್ರ ಮಾಧ್ಯಮಿಕ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಪುರುಷರಿಗಿಂತ ಮಹಿಳೆಯರು ಕಡಿಮೆ ಸಂಬಳಕ್ಕೆ ಅಧಿಕ ಸಮಯ ಕೆಲಸ ಮಾಡುತ್ತಾರೆ ಮತ್ತು ಸಂಬಳ ಪಾವತಿಸದ ಗೃಹ ಕಾರ್ಮಿಕರ ಭಾರವನ್ನು ಹೊರುತ್ತಾರೆ.

ಬೆಂಗಳೂರಿನ 32 ವರ್ಷದ ನಗರ ಯೋಜಕಿ ಪೂಜಾ ಶಾಸ್ತ್ರಿ ಹೇಳುವಂತೆ, 'ಇದೊಂದುಸೂಚನೆ, ಆದರೆ ಒಂದು ಜಿಗುಟಾದ ಕೆಲಸ. ಆ ಸಿಗ್ನಲ್ ಚಿತ್ರಗಳು ನಮಗೆ ರಸ್ತೆಯಲ್ಲಿ ಯಾವುದೇ ಸುರಕ್ಷಿತ ಭಾವನೆ ಮೂಡಿಸುವುದಿಲ್ಲ' ಎನ್ನುತ್ತಾರೆ.

'ಇದು ಸಾಮಾನ್ಯ ಭಾರತೀಯ ಮಹಿಳೆ ಅಥವಾ ನಿರ್ಮಾಣ ಕಾರ್ಯದಲ್ಲಿ ತೊಡಗುವ ಕೆಲಸದಾಕೆಗೆ ತನ್ನ ದೈನಂದಿನ ವೇತನದ ಕೆಲಸಕ್ಕಾಗಿ ರಸ್ತೆ ದಾಟಲು ಏನೂ ಕಷ್ಟವಲ್ಲ'. ಇದರಿಂದಾಗಿ ಅಪರಾಧ ಪ್ರಮಾಣ ಕಡಿಮೆಯಾಗುವುದಿಲ್ಲ. ಕೌಟುಂಬಿಕ ಹಿಂಸಾಚಾರಗಳು ಕೂಡ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ಅವರು.

2012 ರಲ್ಲಿ ದೆಹಲಿ ಬಸ್‌ನಲ್ಲಿ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರವು ದೇಶವನ್ನು ಬೆಚ್ಚಿಬೀಳಿಸಿ, ನಗರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರತಿಭಟನೆ ಮತ್ತು ಚರ್ಚೆಗಳನ್ನು ಪ್ರಾರಂಭಿಸಿತು. ಇದು ಅತ್ಯಾಚಾರದ ಮರಣದಂಡನೆ ಸೇರಿದಂತೆ ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆಗೆ ಕಾರಣವಾಯಿತು.

ಇದೇನೇ ಆಗಿದ್ದರೂ ಕೂಡ ದೇಶದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಕೌಟುಂಬಿಕ ಹಿಂಸಾಚಾರಗಳು ನಿರಂತರವಾಗಿ ಉಳಿದಿದೆ. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ವಿಚಾರಕ್ಕೆ ಬಂದಾಗ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಸ್ಥಳವೆಂದೇ ದೇಶ ಕಂಡುಬಂದಿದೆ. 2018ರ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್‌ನ 550 ಜಾಗತಿಕ ತಜ್ಞರ ಸಮೀಕ್ಷೆಯ ಪ್ರಕಾರ, ಆ ವರ್ಷ 33,356 ಅತ್ಯಾಚಾರಗಳು ಮತ್ತು ಮಹಿಳೆಯರ ವಿರುದ್ಧ ಆದ 89,097 ಹಲ್ಲೆಗಳನ್ನು ವರದಿ ಮಾಡಿದೆ ಎಂದು ಸರ್ಕಾರದ ಅಂಕಿಅಂಶಗಳೇ ತಿಳಿಸಿದೆ.

ನಗರ ಜೀವನಕ್ಕೆ ಚೈತನ್ಯ ತುಂಬುವ ಹೊಸ ಪ್ರಯತ್ನದಲ್ಲಿ ಮುಂಬೈನಲ್ಲಿ ಹೆಚ್ಚಿನ ರಾತ್ರಿ ಕೆಫೆಗಳು ಮತ್ತು 24 ಗಂಟೆಗಳ ಜಿಮ್‌ಗಳು ಮತ್ತು ಚಿತ್ರಮಂದಿರಗಳನ್ನು ಪರಿಚಯಿಸಲು ಠಾಕ್ರೆ ಪ್ರಯತ್ನಿಸಿದಾಗ, ಭಾರತೀಯ ಜನತಾ ಪಕ್ಷದ ರಾಜಕೀಯ ಪ್ರತಿಸ್ಪರ್ಧಿಗಳು ಈ ಯೋಜನೆಯನ್ನು ವಿರೋಧಿಸಿದರು. ಏಕೆಂದರೆ ಇದು ಮಹಿಳೆಯರನ್ನು ಅತ್ಯಾಚಾರಕ್ಕೆ ಹೆಚ್ಚು ಗುರಿಯಾಗಿಸುತ್ತದೆ ಎಂದು ಹೇಳಿದರು.

'ಮದ್ಯದ ಸಂಸ್ಕೃತಿ ಜನಪ್ರಿಯವಾದರೆ ಅದು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ' ಎಂದು ಪಕ್ಷದ ಮುಖಂಡರೊಬ್ಬರು ಆ ಸಮಯದಲ್ಲಿ ಹೇಳಿದ್ದರು.

ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸುವ ಭಾರತದ ಕ್ರಮದಂತೆ ಇತರ ದೇಶಗಳಲ್ಲಿಯೂ ಇದೇ ರೀತಿಯ ನಿರ್ಧಾರಗಳನ್ನು ಅನುಸರಿಸಲಾಯಿತು. ಜರ್ಮನಿ ಮತ್ತು ಆಸ್ಟ್ರೇಲಿಯಾ ಪಾದಚಾರಿ ದಾಟುವ ಚಿಹ್ನೆಗಳಿಗೆ ಉಡುಪುಗಳನ್ನು ಸೇರಿಸಿದವು. ವಿಯೆನ್ನಾದಲ್ಲಿ 2015 ರಲ್ಲಿ ಯೂರೋವಿಷನ್ ಸಾಂಗ್ ಸ್ಪರ್ಧೆಗೂ ಮುಂಚೆ ಸಲಿಂಗ ದಂಪತಿಗಳಿಗಾಗಿ ಏಕವ್ಯಕ್ತಿಯನ್ನು ಬಿಂಬಿಸುವ ಚಿತ್ರಗಳನ್ನು ಬದಲಾಯಿಸಿಕೊಂಡಿದೆ ಮತ್ತು ಜನಪ್ರಿಯ ಬೇಡಿಕೆಯ ಆಧಾರದ ಮೇಲೆ ಅವುಗಳನ್ನು ಹಾಗೇ ಇರಿಸಿಕೊಂಡಿದೆ. ಜಿನೀವಾದಲ್ಲಿ ಕೂಡ ಫೆಬ್ರವರಿಯಲ್ಲಿ ಅಧಿಕಾರಿಗಳು ಪಾದಚಾರಿಗಳು ದಾಟುವ ಅರ್ಧದಷ್ಟು ಚಿಹ್ನೆಗಳಲ್ಲಿ ಮಹಿಳೆಯರ ಚಿತ್ರಗಳನ್ನು ಸೇರಿಸಿದ್ದಾರೆ. ಪ್ಯಾಂಟ್ ಮತ್ತು ಉಡುಪುಗಳ ಮಿಶ್ರಣದಲ್ಲಿ ಅವರು ಗರ್ಭಿಣಿ ಮಹಿಳೆ, ವಯಸ್ಸಾದ ಮಹಿಳೆ, ಆಫ್ರೋ (ನೈಸರ್ಗಿಕವಾಗಿ ಗುಂಗುರು ಕೂದಲು ಹೊಂದುವುದು) ಹೊಂದಿರುವ ಮಹಿಳೆ ಮತ್ತು ಇಬ್ಬರು ಮಹಿಳೆಯರು ಕೈ ಹಿಡಿದಿರುವ ನೆರಳಿನ ಚಿತ್ರಗಳನ್ನು ಸೇರಿಸಿದ್ದಾರೆ.

2017ರಲ್ಲಿ ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್ ಟ್ರಾಫಿಕ್ ದೀಪಗಳಿಗೆ ಸ್ತ್ರೀಯ ಚಿತ್ರಗಳನ್ನು ಸೇರಿಸಿದಾಗ ಕೆಲವು ನಿವಾಸಿಗಳು, ಪ್ಯಾಂಟ್‌ನಲ್ಲಿರುವ ವ್ಯಕ್ತಿ ಪುರುಷ ಮತ್ತು ಉಡುಪಿನಲ್ಲಿರುವುದು ಮಹಿಳೆ ಎಂದು ಭಾವಿಸುವುದು ಹಿಂಜರಿಯುವ ಮತ್ತು ಭಿನ್ನಲಿಂಗೀಯ ಎಂದು ವಾದಿಸಿದರು ಸಿಎನ್‌ಎನ್ ವರದಿ ಮಾಡಿದೆ.

ನಗರ ಯೋಜಕಿ ಮತ್ತು ನಗರ ಯೋಜನೆಯ ಸಹ ಸಂಸ್ಥಾಪಕಿ ವಿಜಯಶ್ರೀ ಪಡ್ನೇಕರ್ ಅವರು ಟ್ವಿಟ್ಟರ್‌ನಲ್ಲಿ ಸಹಾಯಕ ಕಮಿಷನರ್ ಕಿರಣ್ ದಿಘಾವ್ಕರ್ ಅವರಿಗೆ ಈ ವಿಚಾರವನ್ನು ಸೂಚಿಸಿರುವುದಾಗಿ ಹೇಳಿದ್ದಾರೆ.

ತಮ್ಮ ಪುರಸಭೆಯ ಕಚೇರಿಯಿಂದ ನೇಮಕಗೊಂಡ ನಗರ ಯೋಜನಾ ಸಂಸ್ಥೆಯಿಂದ ಈ ವಿಚಾರ ಬಂದಿರುವುದನ್ನು ದೃಢಪಡಿಸಿದ ದಿಘಾವ್ಕರ್, ಸಿಗ್ನಲ್‌ಗಳಲ್ಲಿ ಚಿತ್ರಗಳನ್ನು ಸೇರಿಸುವುದು ಪುರುಷರ ಚಿತ್ರವೇ ಪೂರ್ವನಿಯೋಜಿತವೆಂದು ಭಾವಿಸುವ ಅವರ ಸುಪ್ತಾವಸ್ಥೆಯ ಪಕ್ಷಪಾತದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತಮುತ್ತಲಿನ ಎಲ್ಲದಕ್ಕೂ ಪುರುಷನೇ ಪ್ರಾತಿನಿಧ್ಯವಾಗಿರುತ್ತಾನೆ ಎಂದು ದಿ ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದ್ದಾರೆ.
'ಇದು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಕಡೆಗೆ ಒಂದು ಸಣ್ಣ ಸೂಚಕವಾಗಿದೆ. ಇದು ಈ ನಗರವು ಹೇಗೆ ಯೋಚಿಸುತ್ತದೆ ಎಂಬುದರ ಸಂಕೇತವಾಗಿದೆ ಮತ್ತು ನಗರದ ಪಾತ್ರವನ್ನು ಚಿತ್ರಿಸುತ್ತದೆ' ಎಂದು ಹೇಳಿದ್ದಾರೆ.

ಸಮಾಜಶಾಸ್ತ್ರಜ್ಞೆ ಮತ್ತು 'ವೈ ಲೋಯಿಟರ್? ಮುಂಬೈ ಸ್ಟ್ರೀಟ್‌ಗಳಲ್ಲಿ ಮಹಿಳೆಯರು ಮತ್ತು ಅಪಾಯ ಎನ್ನುವ ಪುಸ್ತಕದ ಸಹ ಲೇಖಕಿಯಾಗಿರುವ ಶಿಲ್ಪಾ ಫಡ್ಕೆ ಪ್ರಕಾರ, 'ಅಂತಹ ಚಿಹ್ನೆಗಳನ್ನು ವ್ಯಾಪಕವಾಗಿ ಅಳವಡಿಸಿಕೊಂಡಾಗ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ತಡರಾತ್ರಿಯಲ್ಲಿ ಮಹಿಳೆಯರ ಅಸ್ತಿತ್ವದ ಹಕ್ಕನ್ನು ಬಲಪಡಿಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸಬಹುದು ಎಂದರು.

'ನೀವು ನಗರದಾದ್ಯಂತ ಅಂತಹ ಹಲವಾರು ದೀಪಗಳನ್ನು ಹೊಂದಿದ್ದರೆ, ಅದು ಮಹಿಳೆಯರು ಅಲ್ಲಿಗೆ ಸೇರಿದ್ದಾರೆ ಎಂಬ ಉತ್ಕೃಷ್ಟ ಸಂದೇಶವನ್ನು ರವಾನಿಸುತ್ತದೆ' ಎಂದು ಅವರು ಹೇಳಿದರು.

ದೊಡ್ಡ ಬದಲಾವಣೆಯಿಲ್ಲದೆ ಸಂಕೇತವು ಅರ್ಥಪೂರ್ಣವಲ್ಲ ಎಂದು ಕಾನೂನು ಸಂಶೋಧಕಿ ವಿಶಾಖ ಒಪ್ಪಿಕೊಂಡರು. ನಗರಗಳಲ್ಲಿನ ಮಹಿಳೆಯರ ನಿಜವಾದ ಅಗತ್ಯತೆಗಳ ಬಗ್ಗೆ ತಿಳುವಳಿಕೆ ಕೊರತೆಯನ್ನು ಎದುರಿಸುತ್ತಿರುವ ಅವರು, ಟ್ರಾಫಿಕ್ ದೀಪಗಳ ಫೋಟೋಗಳನ್ನು ನೋಡಿ ನಗುತ್ತಿದ್ದರು. 'ಕೊನೆಗೂ ನಾವು ಟ್ರಾಫಿಕ್ ಸಿಗ್ನಲ್‌ನಲ್ಲಿ ಮಹಿಳೆಯರ ಚಿತ್ರವನ್ನು ಹೊಂದಿದ್ದೇವೆ. ಆದ್ದರಿಂದ ಈಗ ಮಹಿಳೆಯರು ಪುರುಷರಿಗೆ ಸಮಾನರಾಗಿದ್ದಾರೆ'. 'ನಗರಗಳು ಪ್ರತಿಕೂಲವಾಗಿದ್ದರೆ, ನಾನು ನಗರಕ್ಕೆ ಸೇರಿದವಳೆಂದು ಸೂಚಿಸಿದ್ದಕ್ಕಾಗಿ ನಾನು ಯಾರನ್ನಾದರೂ ಅಭಿನಂದಿಸಬೇಕೇ? ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT