ಮಂಗಳವಾರ, ಮಾರ್ಚ್ 28, 2023
30 °C

ಡ್ರಗ್ ಮಾಫಿಯಾ: ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ ಚಕ್ರವರ್ತಿ ಬಂಧಿಸಿದ ಎನ್‌ಸಿಬಿ

ಮೃತ್ಯುಂಜಯ್ ಬೋಸ್‌ Updated:

ಅಕ್ಷರ ಗಾತ್ರ : | |

Rhea Chakraborty and brother.

ಮುಂಬೈ: ಬಾಲಿವುಡ್ ಡ್ರಗ್ ಮಾಫಿಯಾ ಜಾಲಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಸಹೋದರ ಶೋವಿಕ್‌ ಚಕ್ರವರ್ತಿ ಅವರನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದೆ.

ನಟ ಸುಶಾಂತ್ ಸಿಂಗ್ ರಜಪೂತ್‌ ಅವರಿಗೆ ಆಪ್ತರೂ ಆಗಿದ್ದ ಶೋವಿಕ್‌ ಅವರನ್ನು ಬಂಧಿಸುವುದಕ್ಕೂ ಮುನ್ನ ಇಡೀ ದಿನ ವಿಚಾರಣೆಗೆ ಒಳಪಡಿಸಲಾಗಿತ್ತು.

ಶೋವಿಕ್ ಹಾಗೂ ಸುಶಾಂತ್‌ ಅವರ ಮನೆ ನಿರ್ವಾಹಕ ಸ್ಯಾಮುಯೆಲ್ ಮಿರಾಂಡ ಅವರನ್ನು ಮುಂಬೈನ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಎನ್‌ಸಿಬಿಯ ಪ್ರಾದೇಶಿಕ ಕಚೇರಿಗೆ ಕರೆದೊಯ್ಯಲಾಗಿದೆ.

ರಿಯಾ ಮತ್ತು ಅವರ ತಂದೆ ಲೆ.ಕರ್ನಲ್ (ನಿವೃತ್ತ) ಡಾ. ಇಂದ್ರಜಿತ್ ಗುಪ್ತಾ ಅವರನ್ನೂ ಎನ್‌ಸಿಬಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಶೋವಿಕ್ ಅವರನ್ನು ಶನಿವಾರ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

ಶೋವಿಕ್‌ ಚಕ್ರವರ್ತಿ ಅವರು ಡ್ರಗ್‌ ಡೀಲರ್‌ ಬಾಸಿತ್‌ ಪರಿಹಾರ್‌ ಜೊತೆ ಸಂಪರ್ಕದಲ್ಲಿರುವುದು ಎನ್‌ಸಿಬಿ ವಿಚಾರಣೆ ವೇಳೆ ತಿಳಿದುಬಂದಿತ್ತು.

ಇದನ್ನೂ ಓದಿ: ಡ್ರಗ್‌ ಡೀಲರ್‌ ಜೊತೆ ಎರಡು ವರ್ಷದಿಂದ ಸಂಪರ್ಕದಲ್ಲಿದ್ದ ರಿಯಾ ಸಹೋದರ: ಎನ್‌ಸಿಬಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು