ಭಾನುವಾರ, ನವೆಂಬರ್ 29, 2020
22 °C

ಗುಜರಾತ್‌: ರೋ–ಪ್ಯಾಕ್ಸ್‌ ದೋಣಿ ಸೇವೆಗೆ ಪ್ರಧಾನಿ ಮೋದಿ ಚಾಲನೆ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್:  ಸೂರತ್‌ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ ಮಾರ್ಗ ಕಲ್ಪಿಸುವ ರೋ–ಪ್ಯಾಕ್ಸ್‌ ದೋಣಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ  ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಸೂರತ್‌ ಮತ್ತು ಭಾವನಗರದ ನಡುವೆ ರಸ್ತೆ ಮಾರ್ಗ 375 ಕಿ.ಮೀ ಇದೆ. ಜಲ ಮಾರ್ಗದಲ್ಲಿ ಈ ದೂರ 90 ಕಿ.ಮೀ ಆಗಲಿದೆ’ ಎಂದಿದ್ದಾರೆ.

ಇದು ಸಮಯ ಮತ್ತು ಇಂಧನ ಉಳಿತಾಯ ಮಾಡಲಿದೆ. ಅಲ್ಲದೆ ಪರಿಸರ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಹೆಚ್ಚಿಸಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ(ಪಿಎಂಓ) ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ಮೂರು ಅಂತಸ್ತಿನ ರೋ–ಫ್ಯಾಕ್ಸ್‌ ದೋಣಿಯು 34 ಸಿಬ್ಬಂದಿ ಸೇರಿದಂತೆ 500 ಪ್ರಯಣಿಕರು, 30 ಟ್ರಕ್‌, 100 ಪ್ರಯಣಿಕರ ಕಾರುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು