ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷಗಳ ಹುಸಿ ಭರವಸೆ: ಮತದಾರರಿಗೆ ಮಾಡಿದ ಅವಮಾನ- ಬಿಜೆಪಿ ಸಂಸದ ವರುಣ್‌ ಗಾಂಧಿ

ಬಿಜೆಪಿ ಸಂಸದ ವರುಣ್‌ ಗಾಂಧಿ ಹೇಳಿಕೆ
Last Updated 22 ಫೆಬ್ರುವರಿ 2023, 13:52 IST
ಅಕ್ಷರ ಗಾತ್ರ

ನವದೆಹಲಿ: ‘ಎಲ್ಲಾ ರಾಜಕೀಯ ಪಕ್ಷಗಳು ಮತದಾರರಿಗೆ ಹುಟ್ಟಿನಿಂದ ಸಾವಿನವರೆಗೂ ಉಚಿತ ಕೊಡುಗೆ ನೀಡಲು ಮುಂದಾಗಿವೆ’ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಹೇಳಿದ್ದಾರೆ.

ತಮ್ಮ ಹೊಸ ಪುಸ್ತಕ ‘ದಿ ಇಂಡಿಯನ್‌ ಮೆಟ್ರೊಪೊಲಿಸ್‌’ ಕುರಿತು ಬುಧವಾರ ಮಾತನಾಡಿದ ಅವರು, ‘ಉಚಿತ ಕೊಡುಗೆಗಳ ಮೂಲಕ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ. ಈ ಕುರಿತು ಗಂಭೀರ ಚರ್ಚೆಯಾಗಬೇಕು’ ಎಂದಿದ್ದಾರೆ.

‘ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಹಲವು ಭರವಸೆಗಳನ್ನು ನೀಡುತ್ತವೆ. ಈ ಪೈಕಿ ಕೆಲವು ಈಡೇರುವುದೇ ಇಲ್ಲ. ಇಂತಹ ಹುಸಿ ಭರವಸೆಗಳನ್ನು ನೀಡುವುದು ಮತದಾರರಿಗೆ ಮಾಡಿದ ಅವಮಾನ’ ಎಂದು ತಿಳಿಸಿದ್ದಾರೆ.

‘ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗುವ ಎಲ್ಲಾ ಯೋಜನೆಗಳನ್ನೂ ಉಚಿತ ಕೊಡುಗೆ ಎಂದು ಹೇಳಲಾಗದು. ಬಿಸಿಯೂಟ ಯೋಜನೆಯ ಅಡಿಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಊಟ ನೀಡಲಾಗುತ್ತಿದೆ. ಇದು ಮಕ್ಕಳ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಇದನ್ನು ಉಚಿತ ಕೊಡುಗೆ ಎಂದು ಹೇಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ಉಚಿತ ಕೊಡುಗೆಗಳನ್ನು ಪ್ರಕಟಿಸುವ ಸರ್ಕಾರಗಳು (ಕೇಂದ್ರ ಅಥವಾ ರಾಜ್ಯ) ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವಿನ ಯೋಜನೆಗಳನ್ನೂ ಘೋಷಿಸಬೇಕು. ಮುಂಗಡಪತ್ರವನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿಯನ್ನೂ ತೋರಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT