ಗುರುವಾರ , ನವೆಂಬರ್ 26, 2020
22 °C

ಉಚಿತ ಕೋವಿಡ್-19 ಲಸಿಕೆ ನೀಡುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ: ಮನೋಜ್ ತಿವಾರಿ

ಎಎನ್‌ಐ‌ Updated:

ಅಕ್ಷರ ಗಾತ್ರ : | |

Manoj Tiwari

ಪಟ್ನಾ: ಕೋವಿಡ್ ಲಸಿಕೆಯನ್ನು ಉಚಿತವಾಗಿ ವಿತರಿಸುವುದು 'ರಾಜ್ಯಗಳು ನಿರ್ಧರಿಸಬೇಕಾದ ವಿಷಯ' ಎಂದು ಹೇಳಿರುವ ಬಿಜೆಪಿ ನಾಯಕ ಮನೋಜ್ ತಿವಾರಿ ಸೋಮವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿಯನ್ನು ದೂಷಿಸುವ ಬದಲು, ಉದ್ಧವ್ ಜಿ ಮಹಾರಾಷ್ಟ್ರದಲ್ಲಿ ಉಚಿತ ಕೋವಿಡ್-19 ಲಸಿಕೆ ನೀಡುವುದಾಗಿ ಏಕೆ ಖಾತ್ರಿಪಡಿಸುವುದಿಲ್ಲ. ಇದು ಕೇವಲ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಬಿಹಾರದಲ್ಲಿ ಚುನಾವಣೆಗಳು ನಡೆಯುತ್ತಿವೆ ಮತ್ತು ಎನ್‌ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಅಧಿಕಾರಕ್ಕೆ ಬಂದರೆ ಉಚಿತ ಲಸಿಕೆ ನೀಡುತ್ತದೆ. ವಾಸ್ತವವಾಗಿ, ಉದ್ಧವ್ ಜಿ ಅವರು ಬಯಸಿದರೆ ಲಸಿಕೆಯ ಒಟ್ಟಾರೆ ವೆಚ್ಚವನ್ನು ಅವರೇ (ರಾಜ್ಯ ಸರ್ಕಾರವೇ) ಭರಿಸಬೇಕು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಶಿವಸೇನೆಯ ವಾರ್ಷಿಕ ದಸರಾ ಸಮಾರಂಭದಲ್ಲಿ ಮಾತನಾಡುವಾಗ ಠಾಕ್ರೆ ಹಲವಾರು ವಿಷಯಗಳ ಕುರಿತು ಬಿಜೆಪಿಯ ಮೇಲೆ ದಾಳಿ ನಡೆಸಿದ್ದರು. 

'ನೀವು ಬಿಹಾರದಲ್ಲಿ ಮಾತ್ರ ಉಚಿತ ಲಸಿಕೆಗಳನ್ನು ನೀಡುವ ಬಗ್ಗೆ ಮಾತನಾಡುತ್ತಿದ್ದೀರಿ. ಹಾಗಾದರೆ ದೇಶದ ಉಳಿದ ಭಾಗಗಳು ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇ? ಹಾಗೆ ಮಾತನಾಡುವವರು ತಮ್ಮ ಬಗ್ಗೆ ನಾಚಿಕೆಪಡಬೇಕು' ಎಂದು ಠಾಕ್ರೆ ಕಿಡಿಕಾರಿದ್ದರು.

ಬಿಹಾರ ವಿಧಾನಸಭೆ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ನಡೆಯಲಿದೆ. ಮತಎಣಿಕೆಯು ನವೆಂಬರ್ 10ರಂದು ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು