ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಒಲಿಂಪಿಕ್ಸ್‌ ಪದಕ ವಿಜೇತರ ಔತಣಕೂಟಕ್ಕೆ ಪಂಜಾಬ್ ಮುಖ್ಯಮಂತ್ರಿಯೇ ಬಾಣಸಿಗ!

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರು ಮತ್ತು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಬುಧವಾರ ಆಯೋಜಿಸಲಿರುವ ಭೋಜನ ಕೂಟದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬಾಣಸಿಗನ ಟೋಪಿ ಧರಿಸಲಿದ್ದಾರೆ.

ಮೊಹಾಲಿಯ ಸಿಸ್ವಾನ್‌ನಲ್ಲಿರುವ ಸಿಂಗ್ ಅವರ ಫಾರ್ಮ್‌ಹೌಸ್‌ನಲ್ಲಿ ಔತಣಕೂಟವನ್ನು ಆಯೋಜಿಸಲಾಗಿದೆ.

'ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ನಾಳೆ ಔತಣಕೂಟದಲ್ಲಿ ಪಂಜಾಬ್ ಒಲಿಂಪಿಕ್ಸ್‌ ಪದಕ ವಿಜೇತರಿಗೆ (ನೀರಜ್ ಚೋಪ್ರಾ ಸೇರಿದಂತೆ) ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಲು ಪಟಿಯಾಲ ಪಾಕಪದ್ಧತಿಯಿಂದ ಪುಲಾವ್, ಕುರಿಮರಿ ಮಾಂಸ, ಚಿಕನ್, ಆಲೂ ಮತ್ತು ಜರ್ದಾ ಅನ್ನದವರೆಗೆ ಪ್ರತಿಯೊಂದು ಖಾದ್ಯಗಳನ್ನು ಸ್ವತಃ ತಯಾರಿಸಿ ಬಡಿಸಲಿದ್ದಾರೆ!' ಎಂದು ಸಿಎಂ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಒಲಿಂಪಿಕ್ಸ್ ಪದಕ ವಿಜೇತರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅಡುಗೆ ಮಾಡುವುದಾಗಿ ಸಿಂಗ್ ಭರವಸೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು