ಶನಿವಾರ, ಸೆಪ್ಟೆಂಬರ್ 25, 2021
22 °C

ರಾಜಸ್ಥಾನ ಪಂಚಾಯಿತಿ ಸಮಿತಿಗೆ ಚುನಾವಣೆ: ಕಾಂಗ್ರೆಸ್‌ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ರಾಜ್ಯದಲ್ಲಿ ಪಂಚಾಯಿತಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷ 598 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 490 ಸ್ಥಾನಗಳನ್ನು ಗೆದ್ದುಕೊಂಡಿದೆ.

ಆರು ಜಿಲ್ಲೆಗಳ ಪಂಚಾಯಿತಿ ಸಮಿತಿಗಳ ಒಟ್ಟು 1564 ಸ್ಥಾನಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು. ಮಧ್ಯಾಹ್ನ 3.30ರ ವೇಳೆಗೆ ಒಟ್ಟು 1,389 ಸ್ಥಾನಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಆರ್‌ಎಲ್‌ಪಿ 39, ಬಿಎಸ್‌ಪಿ 10, ಎನ್‌ಸಿಪಿ 2 ಸ್ಥಾನ ಗೆದ್ದಿದೆ. 250 ಸ್ಥಾನದಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ಉಳಿದಂತೆ, ಕಾಂಗ್ರೆಸ್ ಪಕ್ಷವು ಜೋಧ್‌ಪುರದ ಜಿಲ್ಲಾ ಪರಿಷತ್‌ನ ಒಂದು ಸ್ಥಾನವನ್ನೂ ಗೆದ್ದುಕೊಂಡಿದೆ. 

ಶನಿವಾರ ಬೆಳಿಗ್ಗೆ ಮತಗಳ ಎಣಿಕೆ ಆರಂಭವಾಯಿತು. 78 ಪಂಚಾಯಿತಿ ಸಮಿತಿಗಳ 1,564 ಸ್ಥಾನಗಳು ಹಾಗೂ ಆರು ಜಿಲ್ಲಾ ಪರಿಷತ್‌ಗಳ 200 ಸದಸ್ಯ ಸ್ಥಾನಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು