ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವಿಎಫ್‌ನಿಂದ ಮಗು ಜನನ: ತಂದೆ ವಿವರ ಕೇಳುವುದು ಮಹಿಳೆಯ ಘನತೆಗೆ ಧಕ್ಕೆ: ಹೈಕೋರ್ಟ್

Last Updated 16 ಆಗಸ್ಟ್ 2021, 11:33 IST
ಅಕ್ಷರ ಗಾತ್ರ

ಕೊಚ್ಚಿ: ಅವಿವಾಹಿತ/ಒಂಟಿ ಮಹಿಳೆಯರಿಗೆಐವಿಎಫ್‌ನಂತಹ ಪ್ರಕ್ರಿಯೆ ಮೂಲಕ ಜನಿಸುವ ಮಗುವಿನ ತಂದೆಯ ವಿವರವನ್ನು ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ನೋಂದಾಯಿಸುವಂತೆ ಕೇಳುವುದು ತಾಯಿ ಮತ್ತು ಮಗುವಿನ ಘನತೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ‘ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಪತಿಯಿಂದ ವಿಚ್ಛೇದನ ಪಡೆದ ನಂತರ ಮಹಿಳೆಯೊಬ್ಬರು, ಐವಿಎಫ್‌ ಪ್ರಕ್ರಿಯೆಯಿಂದ ಗರ್ಭಧರಿಸಿ, ಮಗುವಿಗೆ ಜನ್ಮ ನೀಡಿದ್ದರು. ಜನನ ಪ್ರಮಾಣ ಪತ್ರ ಪಡೆಯುವ ವೇಳೆ, ಆ ಅರ್ಜಿಯಲ್ಲಿ ತಂದೆಯ ವಿವರವನ್ನು ಕೇಳಲಾಗಿತ್ತು. ಇಂಥ ಪ್ರಕರಣಗಳಲ್ಲಿ ಮಗುವಿನ ತಂದೆಯ ಹೆಸರು ವಿವರ ಬಹಿರಂಗಪಡಿಸುವುದು ತಾಯಿಯ ಘನತೆ, ಸ್ವಾತಂತ್ರ್ಯ ಮತ್ತು ಗೌಪ್ಯತೆಗೆ ಧಕ್ಕೆಯುಂಟಾಗುತ್ತದೆ ಎಂದು ಪ್ರತಿಪಾದಿಸಿದ ಮಹಿಳೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇಂಥ ಪ್ರಕ್ರಿಯೆಯಲ್ಲಿ ಜನಿಸುವ ಮಕ್ಕಳ ನೋಂದಣಿಗೆ ರಾಜ್ಯ ಸರ್ಕಾರ ಸೂಕ್ತ ನಮೂನೆಗಳನ್ನು ಒದಗಿಸಬೇಕೆಂದು ತೀರ್ಪು ನೀಡಿದೆ.

‘ಐವಿಎಫ್ ಪ್ರಕ್ರಿಯೆ ಮೂಲಕ ಅವಿವಾಹಿತ ಮಹಿಳೆ/ಒಂಟಿ ಮಹಿಳೆಗೆ ಜನಿಸುವ ಮಗುವಿನ ತಂದೆಯ ಹೆಸರು ಮತ್ತಿತರ ವಿವರಗಳನ್ನು ಬಹಿರಂಗಪಡಿಸುವುದು ತಾಯಿ ಮತ್ತು ಮಗುವಿನ ಗೌಪ್ಯತೆ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ‘ ಎಂದು ನ್ಯಾಯಾಲಯ ತೀರ್ಪುನಲ್ಲಿ ಉಲ್ಲೇಖಿಸಿದೆ.

ಮಹಿಳೆ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ‘ಮಗುವಿನ ತಂದೆ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ‘ ಎಂದು ಹೇಳಿದ್ದರು. ವೀರ್ಯ ದಾನ ಮಾಡಿರುವವರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ. ಬಹಿರಂಗ ಮಾಡಿದರೆ ತನ್ನ ಖಾಸಗಿತನ, ಸ್ವಾಂತಂತ್ರ್ಯ ಮತ್ತು ಘನತೆಯ ಹಕ್ಕಿಗೆ ಧಕ್ಕೆಯಾಗುತ್ತದೆ‘ ಎಂದು ವಿವರಿಸಿದ್ದರು.

‘ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ತಂದೆಯ ವಿವರಗಳ ಕಾಲಂ ಅನ್ನು ಖಾಲಿ ಬಿಡುವುದು ಕೂಡ ತಾಯಿಯ ಘನತೆ, ಗೌಪ್ಯತೆ ಮತ್ತು ಸ್ವಾತಂತ್ರ್ಯದ ಹಕ್ಕಿಗೆ ಅಡ್ಡಿಯಾಗುತ್ತದೆ‘ ಎಂದು ಆ ಮಹಿಳೆ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT