ಶುಕ್ರವಾರ, ಜುಲೈ 1, 2022
27 °C

‘ಸುರಕ್ಷಿತ ಶಾಲಾ ವಲಯ’: ಬೆಂಗಳೂರು ಸೇರಿ 5 ನಗರಗಳಲ್ಲಿ ಪ್ರಾಯೋಗಿಕ ಅನುಷ್ಠಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಶಾಲೆಗಳ ಸಮೀಪದಲ್ಲಿರುವ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ‘ಸುರಕ್ಷಿತ ಶಾಲಾ ವಲಯ’ಗಳನ್ನು ಸ್ಥಾಪಿಸಲಾಗಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

ಬೆಂಗಳೂರಿನ ಸೇಂಟ್‌ ಜೋಸೆಫ್‌ ಹೈಸ್ಕೂಲ್, ಚಾಮರಾಜಪೇಟೆಯಲ್ಲಿರುವ 116 ವರ್ಷಗಳ ಹಳೆಯ ಕೋಟೆ ಹೈಸ್ಕೂಲ್‌ಗಳು ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆಯಾಗಿವೆ.

ಬಹುರಾಷ್ಟ್ರೀಯ ಕಂಪನಿಯಾದ ‘3ಎಂ ಇಂಡಿಯಾ’ದ ಕಾರ್ಯಕ್ರಮವಾದ ‘ಯಂಗ್‌ ಚೇಂಜ್‌ ಏಜೆಂಟ್ಸ್‌ ಫಾರ್‌ ರೋಡ್‌ ಸೇಫ್ಟಿ’ ಹಾಗೂ ‘ಕನ್ಸರ್ನ್ಸ್ ಫಾರ್‌ ರೋಡ್‌ ಆ್ಯಂಡ್ ಪೆಡೆಸ್ಟ್ರಿಯನ್ ಸೇಫ್ಟಿ’ ಸಹಯೋಗದಲ್ಲಿ ಬೆಂಗಳೂರಿನ ಸೇಂಟ್‌ ಜೋಸೆಫ್ಸ್‌ ಹೈಸ್ಕೂಲ್‌ನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

‘ಸುರಕ್ಷಿತ ಶಾಲಾ ವಲಯ’ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಶಾಲೆಗಳ ಸಮೀಪ ಇರುವ ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದರಲ್ಲೂ ಶಾಲಾ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರ ಸಂಚಾರ, ಶಾಲಾ ವಾಹನಗಳ ಓಡಾಟ ಈ ರಸ್ತೆಗಳಲ್ಲಿ ಹೆಚ್ಚಾಗಿರುವ ಕಾರಣ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಶಾಲೆಗಳಿಗೆ ಸಂಬಂಧಿಸಿದ ಆಸ್ತಿಯಿಂದ 300 ಅಡಿ ದೂರದ ವರೆಗೆ ಅಥವಾ ಶಾಲೆಯಿಂದ 300 ಅಡಿ ದೂರದ ವರೆಗೆ ಈ ವಲಯ ವ್ಯಾಪ್ತಿ ಹೊಂದಿರುತ್ತದೆ.

ಈ ವಲಯದಲ್ಲಿ ಸಂಚರಿಸುವ ವಾಹನಗಳಿಗೆ ನಿಗದಿ ಮಾಡಲಾಗಿರುವ ವೇಗದ ಮಿತಿಯನ್ನು ಸೂಚಿಸುವ ಫಲಕಗಳನ್ನು ಶಾಲಾ ವಲಯ ಆರಂಭಕ್ಕೂ ಮುನ್ನವೇ ಅಳವಡಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ದೆಹಲಿಯ ಮಂದಿರ ಮಾರ್ಗದಲ್ಲಿರುವ ಎನ್‌.ಪಿ.ಬಾಯ್ಸ್ ಸೀನಿಯರ್ ಸೆಕಂಡರಿ ಸ್ಕೂಲ್‌, ಪುಣೆಯ ಜ್ಞಾನ ಪ್ರಬೋಧಿನಿ ಪಾಠಶಾಲಾ, ಗುರುಗ್ರಾಮದ ಸಿಲ್ವರ್‌ ಕ್ರೆಸ್ಟ್‌ ಸ್ಕೂಲ್‌ ಹಾಗೂ ಮುಂಬೈನ ಕ್ರೈಸ್ಟ್‌ ಚರ್ಚ್ ಸ್ಕೂಲ್‌ ಹಾಗೂ ಸೇಂಟ್‌ ಆಗ್ನೇಸ್ ಹೈಸ್ಕೂಲ್‌ ಸಹ ಆಯ್ಕೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು