ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾಗೆ ನಿರ್ಬಂಧ ಹೇರಿದ ಫಿಫಾ; ವಿಶ್ವಕಪ್ ಅರ್ಹತಾ ಟೂರ್ನಿಯಿಂದಲೂ ಹೊರಕ್ಕೆ

Last Updated 1 ಮಾರ್ಚ್ 2022, 4:42 IST
ಅಕ್ಷರ ಗಾತ್ರ

ಪ್ಯಾರಿಸ್: ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದೆ. ಈ ವರ್ಷ ಕತಾರ್‌ನಲ್ಲಿ ಆಯೋಜನೆಯಾಗಲಿರುವ ವಿಶ್ವಕಪ್‌ ಟೂರ್ನಿಗೆ ನಡೆಯುವ ಅರ್ಹತಾ ಪಂದ್ಯಗಳಿಂದಲೂರಷ್ಯಾದ ತಂಡಗಳನ್ನು ಬಹಿಷ್ಕರಿಸಲಾಗಿದೆ.

ವಿವಿಧ ದೇಶಗಳ ಫುಟ್‌ಬಾಲ್ ಸಂಸ್ಥೆಗಳು, ಉಕ್ರೇನ್‌ನಲ್ಲಿಅತಿಕ್ರಮಣ ನಡೆಸುತ್ತಿರುವ ರಷ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫಿಫಾ ಅನ್ನು ಒತ್ತಾಯಿಸಿದ್ದವು. ಹೀಗಾಗಿ, ಯುರೋಪ್ ಫುಟ್‌ಬಾಲ್ ಒಕ್ಕೂಟ ಆಡಳಿತ ಮಂಡಳಿಯ ಸಮನ್ವಯತೆಯೊಂದಿಗೆ ಫಿಫಾ ಸೋಮವಾರ ಈ ನಿರ್ಧಾರ ಕೈಗೊಂಡಿದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ಅವಕಾಶ ನಿರಾಕರಿಸಿ, ಆ ದೇಶದ (ರಷ್ಯಾದ) ಕ್ಲಬ್‌ಗಳಿಗೂ ನಿರ್ಬಂಧ ಹೇರಲಾಗಿದೆ.

ಮುಂದಿನ ಆದೇಶದ ವರೆಗೆ ರಷ್ಯಾ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಫಿಫಾ ಮತ್ತು ಅದರ ಯುರೋಪಿಯನ್ ಫುಟ್‌ಬಾಲ್‌ ಒಕ್ಕೂಟದ ಪ್ರತಿನಿಧಿ ತಿಳಿಸಿದ್ದಾರೆ.

'ಫುಟ್‌ಬಾಲ್ ಇದೀಗ ಸಂಪೂರ್ಣವಾಗಿ ಒಗ್ಗೂಡಿದೆ. ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ಒಗ್ಗಟ್ಟು ಪ್ರದರ್ಶಿಸಲಿದೆ' ಎಂದು ಫಿಫಾ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT