ಪಟ್ನಾ: ಐದನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರಿಗೆ ಮರಣ ದಂಡನೆ ಹಾಗೂ ಸಹ ಶಿಕ್ಷಕರೊಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪೋಕ್ಸೊ ಪ್ರಕರಣಗಳ ಕುರಿತುವಿಶೇಷ ನ್ಯಾಯಾಧೀಶ ಅವದೇಶ್ ಕುಮಾರ್ ಅವರು ಈ ಕುರಿತು ಆದೇಶ ನೀಡಿದ್ದಾರೆ.

ಪ್ರಾಂಶುಪಾಲ ಅರವಿಂದ್ ಕುಮಾರ್ಗೆ ಮರಣದಂಡನೆ ಶಿಕ್ಷೆಯ ಜತೆಗೆ ₹ 1 ಲಕ್ಷ ದಂಡವನ್ನು ವಿಧಿಸಲಾಗಿದೆ. ಸಹ ಆರೋಪಿಯಾದ ಶಿಕ್ಷಕ ಅಭಿಷೇಕ್ ಕುಮಾರ್ಗೆ ಜೀವವಾಧಿ ಶಿಕ್ಷೆಯ ಜತೆಗೆ ₹ 50 ಸಾವಿರ ದಂಡ ವಿಧಿಸಲಾಗಿದೆ.

ಈ ಪ್ರಕರಣ 2018ರ ಸೆಪ್ಟೆಂಬರ್ನಲ್ಲಿ ಬೆಳಕಿಗೆ ಬಂದಿತ್ತು. ಅನಾರೋಗ್ಯಕ್ಕೆ ಒಳಗಾದ 11 ವರ್ಷದ ಮಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಪೋಷಕರಿಗೆ ಗೊತ್ತಾಗಿತ್ತು. ಬಳಿಕ ಬಾಲಕಿಯು ಪೋಷಕರಿಗೆ ಎಲ್ಲ ವಿಷಯ ತಿಳಿಸಿದ್ದಳು. ಆ ನಂತರ ಮಹಿಳಾ ಠಾಣೆಯಲ್ಲಿ ಪೋಕ್ಸೊ ಮತ್ತು ಐಪಿಸಿಯ ಕೆಲ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.