ಗುರುವಾರ , ಮಾರ್ಚ್ 4, 2021
18 °C

‘ಪತ್ರಿಕೆಗಳ ಪಿಡಿಎಫ್‌ ಹಂಚಿಕೆ ಅಪರಾಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪತ್ರಿಕೆಗಳ ಪಿಡಿಎಫ್‌ ಪ್ರತಿಗಳನ್ನು ಅಥವಾ ಡಿಜಿಟಲ್‌ ಆವೃತ್ತಿಯ ಅಂಶಗಳನ್ನು, ಮಾಲೀಕರ ಒಪ್ಪಿಗೆ ಇಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡುವುದು ಕೃತಿಸ್ವಾಮ್ಯ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ವಕೀಲ ಪವನ್‌ ದುಗ್ಗಲ್‌ ಹೇಳಿದ್ದಾರೆ.

ಇಂಥ ಕೃತ್ಯವು ಓದುಗರನ್ನು ತಪ್ಪು ಮಾಹಿತಿ ಅಥವಾ ತಿರುಚಿದ ಮಾಹಿತಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಜತೆಗೆ, ದಿನಪತ್ರಿಕೆಗಳು ಹಾಗೂ ಒಟ್ಟಾರೆ ಪತ್ರಿಕೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಪತ್ರಿಕೆಗಳು ತಮ್ಮ ಸುದ್ದಿಗಳ ಮೂಲಕ ಓದುಗರನ್ನು ಸೆಳೆಯುತ್ತವೆ. ಆದರೆ ಇವೇ ಸುದ್ದಿಗಳು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಮುಕ್ತವಾಗಿ ಲಭ್ಯವಾಗುತ್ತಿದ್ದರೆ ಪತ್ರಿಕೋದ್ಯಮ ವ್ಯವಹಾರದ ಮೇಲೆ ಹಾಗೂ ಪತ್ರಕರ್ತರು, ಸಂಪಾದಕರು, ಛಾಯಾಗ್ರಾಹಕರು, ವಿನ್ಯಾಸಕರು ಮುಂತಾಗಿ ಈ ಕ್ಷೇತ್ರದಲ್ಲಿ ದುಡಿಯುತ್ತಿ ರುವವರ ಮೇಲೆ ಪರಿಣಾಮ ಉಂಟಾ ಗುತ್ತದೆ ಎಂದು ಅವರು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು