ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲದಿಂದ ಸಿಕ್ಕಿಂಗೆ 2 ಲಕ್ಷ 'ಕಾಮನಬಿಲ್ಲಿನ ಸಿಹಿನೀರ ಮೀನು'ಗಳ ಮೊಟ್ಟೆ ರವಾನೆ

Last Updated 22 ಡಿಸೆಂಬರ್ 2021, 6:23 IST
ಅಕ್ಷರ ಗಾತ್ರ

ಶಿಮ್ಲಾ: ಬ್ರಿಟಿಷರು ಭಾರತಕ್ಕೆ ಪರಿಚಯಿಸಿದ ಕಾಮನಬಿಲ್ಲಿನ ಸಿಹಿನೀರು ಮೀನುಗಳ ಸುಮಾರು 2 ಲಕ್ಷ ಮೊಟ್ಟೆಗಳನ್ನು ಮೊದಲ ಹಂತವಾಗಿ ಹಿಮಾಚಲ ಪ್ರದೇಶದಿಂದ ಸಿಕ್ಕಿಂಗೆ ರವಾನಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಸುಮಾರು 3 ಲಕ್ಷ ಮೊಟ್ಟೆಗಳನ್ನು ಕಳುಹಿಸಲಾಗುತ್ತಿದೆ.

ಡಿಸೆಂಬರ್‌ 24ಕ್ಕೆ ಸಿಕ್ಕಿಂಗೆ ಮೊದಲ ಹಂತದ ಮೀನಿನ ಮೊಟ್ಟೆಗಳ ರವಾನೆ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ ಸಚಿವ ವಿರೇಂದರ್‌ ಕನ್ವರ್‌ ತಿಳಿಸಿದ್ದಾರೆ.

ಕಂದು ಮತ್ತು ಕಾಮನಬಿಲ್ಲಿನ ಬಣ್ಣದ ಈ ಮೀನುಗಳು ಸಾಮಾನ್ಯವಾಗಿ ಬ್ಯಾಸ್‌, ಸಟ್ಲೇಜ್‌ ಹಾಗೂ ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿರುವ ಸರೋವರ ಮತ್ತು ನೀರಿನ ಕಾಲುವೆಗಳಲ್ಲಿ ಕಾಣಸಿಗುತ್ತವೆ. ಟ್ರೌಟ್‌ ಎಂದು ಇಂಗ್ಲಿಷ್‌ನಲ್ಲಿ ಕರೆಯಲ್ಪಡುವ ಈ ಮೀನು ಹೆಚ್ಚು ಕ್ರಿಯಾಶೀಲತೆ ಹೊಂದಿದ್ದು, ಮೀನು ಹಿಡಿಯುವ ಕ್ರೀಡೆಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮೈಮೇಲಿನ ಚುಚ್ಚಿಗಳು ಮತ್ತು ಕಾಮನಬಿಲ್ಲಿನ ಬಣ್ಣದಿಂದ ವಿಶೇಷವಾಗಿ ಗುರುತಿಸಿಕೊಂಡಿದೆ.

ಕುಲು, ಚಂಬಾ, ಮಂಡಿ, ಶಿಮ್ಲಾ ಸೇರಿದಂತೆ ಟ್ರೌಟ್‌ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 17 ಲಕ್ಷ ಮೊಟ್ಟೆಗಳು ಬಿರಿಯುವ ಹಂತದಲ್ಲಿವೆ.

ಕಡಿಮೆ ಆಮ್ಲಜನಕವಿರುವೆಡೆ, ನೀರ್ಗಲ್ಲಿನಿಂದ ಆವರಿಸಿದ ನದಿಯೊಳಗೆ ನಿರಾತಂಕವಾಗಿ ಬದುಕುವ ಟ್ರೌಟ್‌ಗಳನ್ನು ವಿಶ್ವದ ಹೆಚ್ಚು ಆರೋಗ್ಯಯುತ ಜೀವಿಗಳ ಪೈಕಿ ಒಂದು ಎಂದು ಗುರುತಿಸಲಾಗಿದೆ. 1909ರಲ್ಲಿ ಭಾರತದಲ್ಲಿ ಮೀನುಗಾರಿಕೆ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಬ್ರಿಟನ್‌ನಿಂದ ಹಿಮಾಚಲ ಪ್ರದೇಶದ ನದಿಗಳಿಗೆ ಟ್ರೌಟ್‌ ಮೀನುಗಳನ್ನು ಪರಿಚಯಿಸಲಾಗಿದೆ. ಆಹಾರ ಖಾದ್ಯವಾಗಿಯೂ ಜನಪ್ರಿಯವಾಗಿರುವ ಸಾಲ್ಮೊನ್‌ ಜಾತಿಯ ಸಿಹಿನೀರ ಮೀನುಗಳ ಸಾಕಣೆಯು ಹಿಮಾಚಲ ಪ್ರದೇಶ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಕೃಷಿಯಾಗಿದೆ. ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ.

ಮೀನುಗಾರಿಕೆ ಕ್ರೀಡೆಗೆಂದೇ ಜೋಪಡಿಗಳನ್ನು ನಿರ್ಮಿಸಿ ವಿದೇಶಿಗರನ್ನು ಸೆಳೆಯುವಲ್ಲಿಯೂ ಸಫಲವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮೀನು ಹಿಡಿಯುವ ಕ್ರೀಡೆಯಲ್ಲಿ ಆಸಕ್ತಿಯುಳ್ಳ 10 ಸಾವಿರಕ್ಕೂ ಹೆಚ್ಚು ಮಂದಿ ವರು ಭೇಟಿ ನೀಡಿದ್ದಾರೆ.

ಚಂಡೀಗಡ, ಪಂಜಾಬ್‌, ಹರಿಯಾಣ ಮತ್ತು ದಿಲ್ಲಿ ಮಾರುಕಟ್ಟೆಗಳಲ್ಲಿ ಸಿಹಿನೀರ ಮೀನುಗಳಿಗೆ ಭಾರಿ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT