ಭಾನುವಾರ, ಜೂನ್ 20, 2021
23 °C

ಕೇರಳದ ಮೂವರು ಮೀನುಗಾರರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತೌತೆ ಚಂಡಮಾರತದ ಹೊಡೆತದಿಂದ ಸಮುದ್ರದಲ್ಲಿ ಅತಂತ್ರರಾಗಿದ್ದ ಕೇರಳದ ಕಣ್ಣೂರು ಜಿಲ್ಲೆಯ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆಯ ಹಡಗು ವಿಕ್ರಮ್‌ ಮೂಲಕ ರಕ್ಷಿಸಲಾಗಿದೆ.

ಮೀನುಗಾರಿಕಾ ಬೋಟ್‌ ಬದ್ರಿಯಾ ಕೇರಳ ತೀರದಿಂದ 10 ನಾಟಿಕಲ್‌ ಮೈಲಿ ದೂರದಲ್ಲಿ ಎಂಜಿನ್‌ ಕೆಟ್ಟು ನಿಂತಿತ್ತು. ಮೇ 14ರ ಮಧ್ಯರಾತ್ರಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ತಮಿಳುನಾಡಿನ ಒಂದು ಬೋಟ್‌ ಹಾಗೂ ಕೇರಳದ ಇನ್ನೊಂದು ಬೋಟ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಆಗ ವಿಕ್ರಂ ಹಡಗಿನ ಸಿಬ್ಬಂದಿ ಈ ಮೀನುಗಾರಿಕಾ ಬೋಟ್‌ ಪತ್ತೆ ಮಾಡಿ, ಮೀನುಗಾರರನ್ನೂ ರಕ್ಷಿಸಿದ್ದಾರೆ.

ಮೀನುಗಾರರಾದ ಅರುಣ್‌ (36), ಎಸ್‌. ಫ್ರಾನ್ಸಿಸ್‌ (58), ಸುರೀಂದರ್‌ (64) ಅವರನ್ನು ರಕ್ಷಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಸಂಸದ ನಳಿನ್‌ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ಮೀನುಗಾರರನ್ನು ಕೇರಳ ಸರ್ಕಾರದ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಕಮಾಂಡರ್‌ ವೆಂಕಟೇಶ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು