ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ದಾಳಿ ವೇಳೆ ಯಾರ ಮನೆಯಲ್ಲಿ ಎಷ್ಟು ಸಂಪತ್ತು ಪತ್ತೆಯಾಯ್ತು? ಇಲ್ಲಿದೆ ವಿವರ

Last Updated 26 ನವೆಂಬರ್ 2021, 6:44 IST
ಅಕ್ಷರ ಗಾತ್ರ

ಕೋಟಿ ವೀರರ ಧನಕನಕ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 15 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ದಾಳಿಯಲ್ಲಿ ಒಟ್ಟು 72.52 ಕೋಟಿ ರುಪಾಯಿಗಳ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿರುವುದಾಗಿ ಭ್ರಷ್ಟಾಚಾರ ನಿಗ್ರಹ ದಳ ತಿಳಿಸಿದೆ.

ಎಸಿಬಿ ಬುಧವಾರ 68 ಸ್ಥಳಗಳಲ್ಲಿ ದಾಳಿ ನಡೆಸಿತ್ತು. 503 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಎಸಿಬಿಯ 68 ತಂಡಗಳು ಈ ಸಂಘಟಿತ ಶೋಧ ನಡೆಸಿವೆ. ಈ ತಂಡಗಳು ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಹೂಡಿಕೆ ದಾಖಲೆಗಳು, ಷೇರುಗಳು, ಬಾಂಡ್‌ಗಳು, ಭೂಮಿ ಮತ್ತು ಇತರ ಆಸ್ತಿ ವಿವರಗಳನ್ನು ಪತ್ತೆ ಮಾಡಿವೆ.

ದಾಳಿ ನಡೆದ ಒಬ್ಬೊಬ್ಬರ ಮನೆಯಲ್ಲಿ ಎಷ್ಟೆಷ್ಟು ಸಂಪತ್ತು ಪತ್ತೆಯಾಯಿತು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಶಾಂತಗೌಡ ಬಿರಾದಾರ್, ಪಿಡಬ್ಲ್ಯೂಡಿ ಕಿರಿಯ ಎಂಜಿನಿಯರ್, ಜೇವರ್ಗಿ

ಒಟ್ಟು ಆಸ್ತಿ ಮೌಲ್ಯ ₹4.15 ಕೋಟಿ, ಆದಾಯ ಮೀರಿ ಶೇ 406.17ರಷ್ಟು ಆಸ್ತಿ ಸಂಪಾದನೆ, ಕಲಬುರ್ಗಿಯಲ್ಲಿ 2 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 36 ಎಕರೆ ಕೃಷಿ ಜಮೀನು, 3 ಕಾರು, 1 ಸ್ಕೂಲ್ ಬಸ್, 2 ಟ್ರ್ಯಾಕ್ಟರ್, ₹54.50 ಲಕ್ಷ ನಗದು, 100 ಗ್ರಾಂ ಚಿನ್ನ, ₹15 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು.

***

ಟಿ.ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಗದಗ

ಒಟ್ಟು ಆಸ್ತಿ ಮೌಲ್ಯ ₹6.65 ಕೋಟಿ, ಆದಾಯ ಮೀರಿ ಶೇ 400ರಷ್ಟು ಆಸ್ತಿ ಸಂಪಾದನೆ, ಶಿವಮೊಗ್ಗದಲ್ಲಿ 2 ಮನೆ, ವಿವಿಧೆಡೆ 4 ನಿವೇಶನ, 9 ಕೆ.ಜಿ. 400 ಗ್ರಾಂ ಚಿನ್ನದ ಗಟ್ಟಿ, 3 ಕೆ.ಜಿ. ಬೆಳ್ಳಿ, 2 ಕಾರು, 3 ದ್ವಿಚಕ್ರ ವಾಹನ, 8 ಎಕರೆ ಕೃಷಿ ಜಮೀನು, ₹15.94 ಲಕ್ಷ ನಗದು, ₹20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.

***

ಕೆ. ಶ್ರೀನಿವಾಸ್, ಕಾರ್ಯಪಾಲಕ ಎಂಜಿನಿಯರ್, ಎಚ್‌ಎಲ್‌ಬಿಸಿ–3 ಕೆ.ಆರ್‌.ಪೇಟೆ

ಒಟ್ಟು ಆಸ್ತಿ ಮೌಲ್ಯ ₹3.10 ಕೋಟಿ, ಆದಾಯ ಮೀರಿ ಶೇ 179.37ರಷ್ಟು ಆಸ್ತಿ ಸಂಪಾದನೆ. ಮೈಸೂರಿನಲ್ಲಿ 1 ಮನೆ, 1 ಫ್ಲ್ಯಾಟ್, 2 ನಿವೇಶನ, ವಿವಿಧಡೆ 4 ಎಕರೆ 34 ಗುಂಟೆ ಕೃಷಿ ಭೂಮಿ, ನಂಜನಗೂಡಿನಲ್ಲಿ ಫಾರ್ಮ್ ಹೌಸ್, 2 ಕಾರು, 1 ಕೆ.ಜಿ. ಚಿನ್ನ, 8.84 ಕೆ.ಜಿ ಬೆಳ್ಳಿ, ₹9.85 ಲಕ್ಷ ನಗದು, ₹22 ಲಕ್ಷದ ಠೇವಣಿ, 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ಕೆ.ಎಸ್. ಲಿಂಗೇಗೌಡ, ಕಾರ್ಯಪಾಲಕ ಎಂಜಿನಿಯರ್ ಸ್ಮಾರ್ಟ್‌ಸಿಟಿ ಮಂಗಳೂರು ಮಹಾನಗರ ಪಾಲಿಕೆ

ಒಟ್ಟು ಆಸ್ತಿ ಮೌಲ್ಯ ₹2.03 ಕೋಟಿ, ಆದಾಯ ಮೀರಿ ಶೇ 146.33 ರಷ್ಟು ಆಸ್ತಿ ಸಂಪಾದನೆ. ಮಂಗಳೂರಿನಲ್ಲಿ 1 ಮನೆ, ಚಾಮರಾಜನಗರ, ಮಂಗಳೂರಿನಲ್ಲಿ 3 ನಿವೇಶನ, 2 ಕಾರು, 1 ಕೆ.ಜಿ ಬೆಳ್ಳಿ, ₹10 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ಎಲ್.ಸಿ. ನಾಗರಾಜ್, ಸಕಾಲ ಆಡಳಿತಾಧಿಕಾರಿ

ಒಟ್ಟು ಆಸ್ತಿ ಮೌಲ್ಯ ₹10.82 ಕೋಟಿ, ಶೇ 198 ರಷ್ಟು ಆಸ್ತಿ ಸಂಪಾದನೆ. ಬೆಂಗಳೂರಿನಲ್ಲಿ 1 ಮನೆ ಹಾಗೂ
ನಿವೇಶನ, ನೆಲಮಂಗಲದಲ್ಲಿ 1 ಮನೆ, 11 ಎಕರೆ 26 ಗುಂಟೆ ಜಮೀನು, ಕೈಗಾರಿಕಾ ಉದ್ದೇಶದ ಕಟ್ಟಡ, 3 ಕಾರು, 1.76 ಕೆ.ಜಿ ಚಿನ್ನ, 7.28 ಕೆ.ಜಿ ಬೆಳ್ಳಿ, ₹43 ಲಕ್ಷ ನಗದು, ₹14 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ಎಸ್.ಎಸ್. ರಾಜಶೇಖರ್, ಪಿಸಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ

ಒಟ್ಟು ಆಸ್ತಿ ಮೌಲ್ಯ ₹1.40 ಕೋಟಿ, ಅದಾಯ ಮೀರಿ ಶೇ 77 ಆಸ್ತಿ ಸಂಪಾದನೆ. ಮಾರಸಂದ್ರದಲ್ಲಿ 1 ಫ್ಲ್ಯಾಟ್, ಯಲಹಂಕದ ಶಿವನಹಳ್ಳಿಯಲ್ಲಿ 2 ಅಂತಸ್ತಿ ಫ್ಲ್ಯಾಟ್, ಮೈಲನಹಳ್ಳಿಯಲ್ಲಿ 1 ನಿವೇಶನ, 1 ಕಾರು, ₹4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ಮಾಯಣ್ಣ, ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ

ಒಟ್ಟು ಆಸ್ತಿ ಮೌಲ್ಯ ₹4.92 ಕೋಟಿ, ಆದಾಯ ಮೀರಿ ಶೇ 138ರಷ್ಟು ಆಸ್ತಿ ಸಂಪಾದನೆ. ಬೆಂಗಳೂರಿನಲ್ಲಿ 4 ಮನೆ, ವಿವಿಧೆಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 1 ಕಾರು, ₹59 ಸಾವಿರ ನಗದು, ₹10 ಲಕ್ಷ ಠೇವಣಿ, ಉಳಿತಾಯ ಖಾತೆಯಲ್ಲಿ ₹1.50 ಲಕ್ಷ, 600 ಗ್ರಾಂ ಚಿನ್ನ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, ₹12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.

***

ಕೆ.ಎಸ್. ಶಿವಾನಂದ, ನಿವೃತ್ತ ಉಪನೋಂದಣಾಧಿಕಾರಿ, ಬಳ್ಳಾರಿ

ಒಟ್ಟು ಆಸ್ತಿ ₹1.37 ಕೋಟಿ, ಆದಾಯ ಮೀರಿ ಶೇ 198ರಷ್ಟು ಆಸ್ತಿ ಸಂಪಾದನೆ. ಮಂಡ್ಯದಲ್ಲಿ 1 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 1 ಕಾರು, ಶಕ್ರಪುರ ಗ್ರಾಮದಲ್ಲಿ ವಾಣಿಜ್ಯ ಸಂಕೀರ್ಣ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ 7 ಎಕರೆ ಕೃಷಿ ಜಮೀನು, ₹ 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ಸದಾಶಿವರಾಯಪ್ಪ ಮರಲಿಂಗಣ್ಣನವರ, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ

ಒಟ್ಟು ಆಸ್ತಿ ಮೌಲ್ಯ ₹3.05 ಕೋಟಿ, ಆದಾಯ ಮೀರಿ ಶೇ 190.81ರಷ್ಟು ಆಸ್ತಿ ಸಂಪಾದನೆ. ಬೆಳಗಾವಿಯಲ್ಲಿ 1 ಮನೆ, 22 ಎಕರೆ ಕೃಷಿ ಜಮೀನು, 1.35 ಕೆ.ಜಿ ಚಿನ್ನ, ₹8.22 ಲಕ್ಷ ನಗದು, ₹5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ, ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ, ಬೆಳಗಾವಿ ಜಿಲ್ಲೆ ರಾಯಭಾಗ

ಒಟ್ಟು ಆಸ್ತಿ ಮೌಲ್ಯ ₹1.74 ಕೋಟಿ, ಆದಾಯ ಮೀರಿ ಶೇ 191.91ರಷ್ಟು ಆಸ್ತಿ ಸಂಪಾದನೆ. ಬೈಲಹೊಂಗಲದಲ್ಲಿ 2 ಮನೆ, 4 ನಿವೇಶನ, 4 ಕಾರು, 6 ದ್ವಿಚಕ್ರ ವಾಹನ, 263 ಗ್ರಾಂ ಚಿನ್ನ, 945 ಗ್ರಾಂ ಬೆಳ್ಳಿ, ₹1.50 ಲಕ್ಷ ಮೌಲ್ಯದ ಠೇವಣಿ, ₹1.10 ಲಕ್ಷ ನಗದು, ₹5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

***

ನಾಥಾಜಿ ಪೀರಾಜಿ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್–2 ಹೆಸ್ಕಾಂ, ಬೆಳಗಾವಿ

ಒಟ್ಟು ಆಸ್ತಿ ಮೌಲ್ಯ ₹2.20 ಕೋಟಿ, ಆದಾಯ ಮೀರಿ ಶೇ 141.30ರಷ್ಟು ಆಸ್ತಿ ಸಂಪಾದನೆ. ಬೆಳಗಾವಿಯಲ್ಲಿ 1 ಮನೆ, 2 ನಿವೇಶನ, 1 ಕಾರು, 239 ಗ್ರಾಂ ಚಿನ್ನ, 1.80 ಕೆ.ಜಿ ಬೆಳ್ಳಿ, ₹38 ಸಾವಿರ ನಗದು, ₹20 ಲಕ್ಷ ಬೆಲೆಬಾವಳುವ ಗೃಹೋಪಯೋಗಿ ವಸ್ತುಗಳು.

***

ಲಕ್ಷ್ಮೀನರಸಿಂಹಯ್ಯ, ಕಂದಾಯ ನಿರೀಕ್ಷಕ, ದೊಡ್ಡಬಳ್ಳಾಪುರ

ಒಟ್ಟು ಆಸ್ತಿ ಮೌಲ್ಯ ₹1.83 ಕೋಟಿ, ಆದಾಯ ಮೀರಿ ಶೇ 141.30 ರಷ್ಟು ಆಸ್ತಿ ಸಂಪಾದನೆ. 5 ಮನೆ, 6 ನಿವೇಶನ, 25 ಗುಂಟೆ ಜಮೀನು, 765 ಗ್ರಾಂ ಚಿನ್ನ, 15 ಕೆ.ಜಿ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನ, ₹1.13 ಲಕ್ಷ ನಗದು.

***

ಬಿ. ಕೃಷ್ಣಾರೆಡ್ಡಿ, ನಂದಿನ ಹಾಲಿನ ಡೇರಿಯ ಪ್ರಧಾನ ವ್ಯವಸ್ಥಾಪಕ

ಒಟ್ಟು ಆಸ್ತಿ ಮೌಲ್ಯ ₹4.82 ಕೋಟಿ, ಆದಾಯ ಮೀರಿ ಶೇ 305ರಷ್ಟು ಆಸ್ತಿ ಸಂಪಾದನೆ. 3 ಮನೆ, 9 ನಿವೇಶನ, 5 ಎಕರೆ 30 ಗುಂಟೆ ಕೃಷಿ ಜಮೀನು, ಹೊಸಕೋಟೆ ತಾಲ್ಲೂಕಿನಲ್ಲಿ ಪೆಟ್ರೋಲ್ ಬಂಕ್, 383 ಗ್ರಾಂ ಚಿನ್ನ, 3.30 ಕೆಜಿ ಬೆಳ್ಳಿ, ₹3 ಲಕ್ಷ ನಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT