ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ತಂತ್ರಜ್ಞಾನ ಶೃಂಗ: ಸಾಧಕ ಕಂಪನಿಗಳಿಗೆ ಪುರಸ್ಕಾರ ಪ್ರದಾನ

Last Updated 18 ನವೆಂಬರ್ 2021, 15:55 IST
ಅಕ್ಷರ ಗಾತ್ರ

ಬೆಂಗಳೂರು: ಗಮನಾರ್ಹ ಸಾಧನೆ ಮಾಡಿರುವ ಐದು ಕಂಪನಿಗಳಿಗೆ ‘ಸ್ಮಾರ್ಟ್ ಬಯೋ ಪುರಸ್ಕಾರ’ ಮತ್ತು ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ ‘ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನವಾದ ಗುರುವಾರ ಪ್ರದಾನ ಮಾಡಲಾಯಿತು. ಸರ್ಕಾರದ ಪರವಾಗಿ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಗೌರವ ಪ್ರದಾನ ಮಾಡಿದರು.

ಪುರಸ್ಕೃತ ಕಂಪನಿಗಳ ವಿವರ ಕೆಳಕಂಡಂತಿದೆ:

ಸ್ಮಾರ್ಟ್ ಬಯೋ ಪುರಸ್ಕಾರ ವಿಭಾಗ

1. ಆಕ್ಸಿಯೋ ಬಯೋಸೊಲ್ಯೂಷನ್ಸ್ ಪ್ರೈ.ಲಿ., (ವರ್ಷದ ನಾವೀನ್ಯತಾ ಕಂಪನಿ- ವರ್ಷದ ಇನ್ನೋವೇಟರ್’)

2. ನಿಯೋಡಿಕ್ಸ್ ಬಯೋಟೆಕ್ ಲ್ಯಾಬ್ಸ್ ಪ್ರೈ,ಲಿ. (ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ಸ್ಟಾರ್ಟಪ್)

3. ಜನನಿ ವೆಂಕಟರಾಮನ್, ಪ್ರವರ್ತಕಿ, ಬಯೋಮೊನೆಟಾ (ವರ್ಷದ ಮಹಿಳಾ ಉದ್ಯಮಿ)

4. ಬಯೋಕಾನ್ ಅಕಾಡೆಮಿ (ಅತ್ಯುತ್ತಮ ಸಾಮಾಜಿಕ ಉದ್ಯಮ)

5. ಹೆಲ್ತ್ ಕ್ಯೂಬ್ (ವರ್ಷದ ಅತ್ಯುತ್ತಮ ಬಯೋಟೆಕ್ ಸ್ಟಾರ್ಟಪ್)

ಬೆಂಗಳೂರು ಇಂಪ್ಯಾಕ್ಟ್ ಪುರಸ್ಕೃತ ಕಂಪನಿಗಳು

ಅಪನಾ, ಬಿಗ್ ಬ್ಯಾಸ್ಕೆಟ್, ಬ್ಲ್ಯಾಕ್ ಬಕ್, ಕಾಯಿನ್ಸ್ ವಿಚ್, ಸಿಆರ್ ಇಡಿ, ಕ್ಯೂರ್ ಫಿಟ್, ಡೈಲಿ ಹಂಟ್, ಗ್ರೋ, ಮೀಶೂ, ಎಂಪಿಎಲ್, ಫೋನ್ ಪೇ, ರೇಜರ್ ಪೇ, ಉಡಾನ್, ಅನ್ಅಕಾಡೆಮಿ, ಜೆರೋಡಾ ಮತ್ತು ಝೆಟ್ ವರ್ಕ್.

ಸ್ಟಾರ್ಟಪ್ ಮಾರ್ಗದರ್ಶಿ ಲೋಕಾರ್ಪಣೆ
ಬಿಟಿಎಸ್ ಶೃಂಗಸಭೆಯಲ್ಲಿ ಗುರುವಾರ ನಡೆದ ‘ಬೆಂಗಳೂರು ನೆಕ್ಸ್ಟ್’ ಸಂವಾದ ಗೋಷ್ಠಿಯಲ್ಲಿ ರಾಜ್ಯ ಸರ್ಕಾರವು ಸಿಕೋಯಿಯಾ ಕಂಪನಿಯ ಜತೆಗೂಡಿ ಹೊರತಂದಿರುವ ‘ಸ್ಟಾರ್ಟಪ್ ಸ್ಥಾಪನೆ ಮಾರ್ಗದರ್ಶಿ’ಯನ್ನು ಸಚಿವ ಅಶ್ವತ್ಥನಾರಾಯಣ ಲೋಕಾರ್ಪಣೆ ಮಾಡಿದರು. 70 ಪುಟಗಳ ಈ ಕೈಪಿಡಿಯು ಸ್ಟಾರ್ಟಪ್ ಸ್ಥಾಪಿಸುವ ಆಸಕ್ತಿ ಹೊಂದಿರುವವರಿಗೆ ಉಪಯುಕ್ತ ಸಲಹೆಗಳನ್ನು ಒಳಗೊಂಡಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉಚಿತವಾಗಿ ಲಭ್ಯವಿದೆ. ಈ ಸಂದರ್ಭದಲ್ಲಿ ಸಿಕೋಯಿಯಾ ಕಂಪನಿಯ ಉಪಾಧ್ಯಕ್ಷೆ ಶ್ವೇತಾ ರಾಜಪಾಲ್ ಕೊಹ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT