ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊಸ ಟೊಯೊಟಾ ವೆಲ್‌ಫೈರ್ ಕಾರನ್ನು ಖರೀದಿ ಮಾಡಿದ್ದು, ತೆರಿಗೆ ಸೇರಿ ಇದರ ಮೌಲ್ಯ ₹1 ಕೋಟಿ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಾರು ಬಳಸುತ್ತಿದ್ದರು. ಈಗ ಹೆಚ್ಚು ದೂರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಈ ಕಾರು ಖರೀದಿ ಮಾಡಿದ್ದಾರೆ.ಇದರ ಮೂಲ ಬೆಲೆ ₹87 ಲಕ್ಷ. ಈಗಾಗಲೇ ನೋಂದಣಿ ಮಾಡಿಸಿದ್ದು, ಶುಕ್ರವಾರ ಶಿವಮೊಗ್ಗಕ್ಕೆ ಇದೇ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ.

ಹಿರಿಯ ಸಚಿವರೊಬ್ಬರ ಬಳಿ ಇಂತಹದ್ದೇ ಕಾರು ನೋಡಿದ್ದರು. ಒಳಗೆ ಹೆಚ್ಚು ಜಾಗ ಇದೆ. ಕಾರಿನ ಸೀಟನ್ನೇ ಹಾಸಿಗೆಯಂತೆ ಮಡಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಚುನಾವಣೆ ಓಡಾಟಕ್ಕೆ ಈ ಕಾರನ್ನು ಬಳಸಲಿದ್ದಾರೆ.ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು ಇದಕ್ಕಿಂತ ದುಬಾರಿ ಮೌಲ್ಯದ ಕಾರು ಹೊಂದಿದ್ದಾರೆ. ಅವುಗಳಿಗೆ ಹೋಲಿಸಿದರೆ ಈ ಕಾರು ಅಷ್ಟೇನು ಐಷಾರಾಮಿ ಅಲ್ಲ ಎಂದು ಯಡಿಯೂರಪ್ಪ ಅವರ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.