ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯ ಹಸ್ತಕ್ಕೆ ಕಾದಿರುವ ಚೌಡೇಶ್‌

Last Updated 29 ಆಗಸ್ಟ್ 2020, 18:27 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಎಕನಾಮಿಕ್ಸ್‌ ಬೋಧಿಸುವ ಚೌಡೇಶ್‌ ಎಸ್‌. ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿದ್ದಾರೆ.

ನೆಟ್‌, ಕೆ–ಸೆಟ್‌ ಪರೀಕ್ಷೆ ಉತ್ತೀರ್ಣರಾಗಿರುವ ಅವರು ಕಾಯಂ ಉದ್ಯೋಗಕ್ಕಾಗಿ ಕಾಯುತ್ತಿದ್ದರು. ನಾಲ್ಕು ತಿಂಗಳುಗಳಿಂದ ಅವರ ಕಾಲು ಗ್ಯಾಂಗ್ರಿನ್‌ ಆಗಿದೆ. ಈಗ ಡೆಂಗಿ ಜ್ವರ ಕೂಡ ಬಂದಿದೆ. ಅವರ ಸ್ಥಿತಿ ನೋಡಿ ಅತಿಥಿ ಉಪನ್ಯಾಸಕರು ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಲ್ಲದೇ ಬೇರೆಯವರು ಸಹಾಯ ಮಾಡುವಂತೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಮನವಿ ಮಾಡಿದ್ದಾರೆ. ಅತಿಥಿ ಉಪನ್ಯಾಸಕರು ₹ 15 ಸಾವಿರ ನೀಡಿದ್ದರೆ, ಸಂತೇಬೆನ್ನೂರು ಕಾಲೇಜಿನ ಉಪನ್ಯಾಸಕರು ₹ 20 ಸಾವಿರ ನೀಡಿದ್ದಾರೆ. ಶನಿವಾರ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ನೆರವು ನೀಡುವವರು ಅವರ ಉಳಿತಾಯ ಖಾತೆಗೆ (ಖಾತೆ ಸಂಖ್ಯೆ: 64131189398, ಐಎಫ್‌ಎಸ್‌ಸಿ ಕೋಡ್‌: SBIN0040340) ಹಣ ಪಾವತಿಸಬಹುದು ಎಂದು ಅತಿಥಿ ಉಪನ್ಯಾಸಕ ಶಿವಕುಮಾರ್‌ ಯರಗಟ್ಟಿಹಳ್ಳಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT