ಗುರುವಾರ , ಸೆಪ್ಟೆಂಬರ್ 16, 2021
29 °C

ನೂತನ ಸಚಿವರಿಗೆ ಗಂಟೆಯೊಳಗೆ ಖಾತೆ ಹಂಚಿಕೆ: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನೂತನ ಸಚಿವರಿಗೆ ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಬಹುತೇಕ ಇನ್ನು ಒಂದು ಗಂಟೆಯ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಆರ್.ಟಿ. ನಗರದಲ್ಲಿರುವ ತರಳುಬಾಳು ಮಠಕ್ಕೆ ಶನಿವಾರ ತೆರಳಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ದಾವಣಗೆರೆ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರು ಉಪಸ್ಥಿತರಿದ್ದರು.

ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಯಾರೂ ಯಾವುದೇ ಖಾತೆಗೂ ಪಟ್ಟು ಹಿಡಿದಿಲ್ಲ. ನಾನು ಅದೃಷ್ಟವಂತ ಮುಖ್ಯಮಂತ್ರಿ. ಸಚಿವ ಸಂಪುಟದವರು ಯಾರೂ ಪ್ರಭಾವ ಬೀರಿಲ್ಲ. ಕೆಲವರು ಇಂಥ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆಯೇ ಹೊರತು ಯಾರ ಒತ್ತಡವೂ ಇಲ್ಲ’ ಎಂದರು.

‘ಕೋವಿಡ್‌ ಸಭೆಯ ಬಳಿಕ ವಚನಾನಂದ ಸ್ವಾಮೀಜಿ ಭೇಟಿ ಮತ್ತು ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ತಡವಾಗಿ ಬಂದೆ. ಹೀಗಾಗಿ, ಖಾತೆ ಹಂಚಿಕೆ ಸಾಧ್ಯ ಆಗಿಲ್ಲ. ರಾತ್ರಿ ತಡವಾಗಿ ಖಾತೆ ಹಂಚಿಕೆ ಮಾಡಬೇಡಿ ಎಂದು ಕೆಲವು ಸಲಹೆ ನೀಡಿದರು. ಹೀಗಾಗಿ ಮಾಡಿಲ್ಲ’ ಎಂದು ಸಮರ್ಥನೆ ನೀಡಿದರು.

‘ಕೋವಿಡ್‌ ಬಗ್ಗೆ ಹಲವು ನಿರ್ಧಾರಗಳನ್ನು ಮಾಡಿದ್ದೇವೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟು ಅತ್ಯಂತ ದಕ್ಷತೆಯಿಂದ ನಿರ್ಧಾರಗಳನ್ನು ಕಾರ್ಯಗತಗೊಳಿಸುವಂತೆ ತಿಳಿಸಿದ್ದೇನೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು