ಬೆಂಗಳೂರು: ‘ಲೋಕಸಭೆ ಚುನಾವಣೆಯನ್ನು ಮೋದಿ ವರ್ಚಸ್ಸಿನಿಂದ ಗೆಲ್ಲಬಹುದು ಎಂಬ ಯಡಿಯೂರಪ್ಪನವರ ಮಾತು, ಅವರು ಹಾಕಿದ ಬರೆಗೆ ಮುಲಾಮು ಹಚ್ಚುವಂಥ ಜಾಣತನದ ಮಾತಿನಂತಿದೆ’ ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ. ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ.

’ಮೋದಿಯವರ ವರ್ಚಸ್ಸಿನಿಂದ ಮಾತ್ರ ರಾಜ್ಯಮಟ್ಟದ ಚುನಾವಣೆಗಳಲ್ಲಿ ಗೆಲ್ಲುವುದು ಸಾಧ್ಯವಿಲ್ಲವೆಂದು ಈವರೆಗೂ ಬಿಜೆಪಿಯಲ್ಲಿ, ಅದರಲ್ಲೂ ರಾಜ್ಯಮಟ್ಟದ ನಾಯಕರೊಬ್ಬರು ಹೇಳುವ ಧೈರ್ಯ ಮಾಡಿಲ್ಲ. ಹೀಗಾಗಿ, ಯಡಿಯೂರಪ್ಪ ಅವರ ಹೇಳಿಕೆ ದೊಡ್ಡ ಸದ್ದು-ಸುದ್ದಿ ಮಾಡಿದೆ’ ಎಂದೂ ಹೇಳಿದ್ದಾರೆ.

‘ಯಡಿಯೂರಪ್ಪ ಅವರ ಹೇಳಿಕೆಗೆ ಆಧಾರಗಳೂ ಇವೆ. ಮುಖ್ಯವಾಗಿ, ಕೇಂದ್ರ ಸರ್ಕಾರದ ಎಲ್ಲ ಸೌಲಭ್ಯಗಳು ಮತ್ತು ಚುನಾವಣಾ ಆಯೋಗ ಎಂಟು ಹಂತಗಳಲ್ಲಿ ಚುನಾವಣೆ ನಡೆಸಿದರೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಬಿಜೆಪಿಗೆ ಸೋಲು ಉಂಟಾಗಿದೆ. ಕೇರಳದಲ್ಲಿ ಮುಖಭಂಗ ಆಗಿದೆ. ಮೋದಿಯವರ ಪ್ರಭಾವ ತೀಕ್ಷ್ಣವಾಗಿ ಇಳಿಮುಖ ಆಗಿರುವುದನ್ನು ಈ ರಾಜ್ಯಗಳ ಚುನಾವಣೆ ಸಾಬೀತುಪಡಿಸಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಮೋದಿಯವರ ಸ್ವಂತ ರಾಜ್ಯ ಗುಜರಾತಿನಲ್ಲಿ ಮುಖ್ಯಮಂತ್ರಿ ಸೇರಿ ಇಡೀ ಸಂಪುಟವನ್ನು ಬಿಜೆಪಿ ಪುನರ್ರಚಿಸಿದೆ. ಉತ್ತರಾಖಂಡದ ಇಬ್ಬರು ಮುಖ್ಯಮಂತ್ರಿಗಳ ಕ್ಷಿಪ್ರ ಬದಲಾವಣೆ ಮೋದಿ ಪ್ರಭಾವದ ವಿರುದ್ಧ ಜನಾಭಿಪ್ರಾಯ ಬದಲಾದಂತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.