ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುತ್ತಲೇ ತರಾತುರಿಯಲ್ಲಿ ಆಟೋ ಹತ್ತಿ ಹೋದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು

Last Updated 14 ಡಿಸೆಂಬರ್ 2021, 12:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧೆ ಮಾಡಿ, ಭಾರಿ ಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ 1227 ಮತ ಪಡೆದರೆ, ಕೆಜಿಎಫ್‌ ಬಾಬು 830 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ 2057 ಮತಗಳು ಚಲಾವಣೆಗೊಂಡಿದ್ದವು. 13 ಮತಗಳು ತಿರಸ್ಕೃತಗೊಂಡಿದ್ದವು.

ಮತ ಎಣಿಕೆ ನಡೆಯುತ್ತಿರುವಾಗಲೇ ಸೋಲಿನ ಸುಳಿವು ಹಿಡಿದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಎಣಿಕೆ ಕೇಂದ್ರದಿಂದ ತರಾತುರಿಯಲ್ಲಿ ಹೊರಗೆ ಬಂದು, ಬಂದಷ್ಟೇ ವೇಗದಲ್ಲಿ ಆಟೊ ಹತ್ತಿ ಹೊರಟರು. ಈ ವಿಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಕೆಜೆಎಫ್‌ ಬಾಬು ಅವರು ತಮ್ಮ ಐಷಾರಮಿ ಕಾರು ರೋಲ್ಸ್‌ ರಾಯ್ಸ್‌ ಮತ್ತು ಭಾರಿ ಮೊತ್ತದ ಆಸ್ತಿಯ ಮೂಲಕವೇ ಪ್ರಚಾರ ಗಳಿಸಿದ್ದವರು. ಆದರೆ, ಹೀಗೆ ಗಡಿಬಿಡಿಯಲ್ಲಿ ಆಟೊ ಹತ್ತಿ ಹೊರಟಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿತು.

5ನೇ ತರಗತಿ ಓದಿರುವ ಯೂಸುಫ್‌ ಷರೀಫ್‌ ಅವರು ಚುನಾವಣಾ ಅಫಿಡವಿಟ್‌ನಲ್ಲಿ₹1743 ಕೋಟಿಆಸ್ತಿಘೋಷಿಸಿಕೊಂಡಿದ್ದರು.ತಾವು ಪ್ರತಿನಿಧಿಸುವ ಬೆಂಗಳೂರು ನಗರ ಕ್ಷೇತ್ರಕ್ಕೆ ₹500 ಕೋಟಿ ನೀಡುವುದಾಗಿ ಬಾಬು ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT