ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Updates: 39,998 ಹೊಸ ಪ್ರಕರಣ, 517 ಸಾವು

Last Updated 12 ಮೇ 2021, 19:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 39,998 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಈವರೆಗೆ ಕೋವಿಡ್ ಪೀಡಿತರಾದವರ ಸಂಖ್ಯೆ 20.53 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷದತ್ತ (5.92 ಲಕ್ಷ) ದಾಪುಗಾಲು ಇರಿಸಿದೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 275 ಮಂದಿ ಸೇರಿದಂತೆ ರಾಜ್ಯದಲ್ಲಿ 517 ಮಂದಿ ಮೃತಪಟ್ಟಿರುವುದು ಬುಧವಾರ ದೃಢಪಟ್ಟಿದೆ. ಇದರಿಂದಾಗಿ ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 20 ಸಾವಿರ (20,368) ದಾಟಿದೆ.

ಕಳೆದ ವರ್ಷ ಮಾರ್ಚ್ 10ರಂದು ರಾಜ್ಯದಲ್ಲಿ ಮೊದಲ ಕೋವಿಡ್ ಮರಣ ಪ್ರಕರಣ ವರದಿಯಾಗಿತ್ತು. ವರ್ಷಾಂತ್ಯದ ವೇಳೆಗೆ ಮೃತಪಟ್ಟವರ ಸಂಖ್ಯೆ 12 ಸಾವಿರಕ್ಕೆ ಏರಿಕೆಯಾಗಿತ್ತು. ಈ ವರ್ಷ ನಾಲ್ಕೂವರೆ ತಿಂಗಳಿನಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಮಂಗಳವಾರ 1.16 ಲಕ್ಷಕ್ಕೆ ಇಳಿಕೆ ಯಾಗಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆ ಬುಧವಾರ 1.34 ಲಕ್ಷಕ್ಕೆ ಏರಿಕೆಯಾಗಿದೆ.

24 ಗಂಟೆಗಳ ಅವಧಿಯಲ್ಲಿ 39,998 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಈವರೆಗೆ ಕೋವಿಡ್ ಪೀಡಿತರಾದವರ ಸಂಖ್ಯೆ 20.53 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷದತ್ತ (5.92 ಲಕ್ಷ) ದಾಪುಗಾಲು ಇರಿಸಿದೆ.

ಕಳೆದ 15 ದಿನಗಳಿಂದ ಡಬಲ್ ಮ್ಯುಟೆಂಟ್ ಬಿ.1.617 ಮಾದರಿಯ ವೈರಾಣು ಕೂಡ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಮತ್ತೆ 86 ಮಂದಿಯಲ್ಲಿ ಈ ಮಾದರಿಯ ವೈರಾಣು ಪತ್ತೆಯಾಗಿದೆ. ಇದರಿಂದಾಗಿ ಈವರೆಗೆ ಹೊಸ ಮಾದರಿಯ ವೈರಾಣು ವನ್ನು ಹೊಂದಿದವರ ಸಂಖ್ಯೆ 148ಕ್ಕೆ ಏರಿಕೆಯಾಗಿದೆ. ನಿಮ್ಹಾನ್ಸ್ ಪ್ರಯೋ ಗಾಲಯದಲ್ಲಿ ಶಂಕಿತ ಮಾದರಿಗಳ ಜಿನೋಮಿಕ್ ಸಿಕ್ವೆನ್ಸೀಸ್‌ ಪರೀಕ್ಷೆ ನಡೆಸಲಾಗುತ್ತಿದ್ದು, ಅಲ್ಲಿ ಇನ್ನೂ 650 ರಿಂದ 700 ಮಾದರಿಗಳ ಪರೀಕ್ಷೆ ನಡೆಸ ಬೇಕಿದೆ. ಸದ್ಯ ವಾರಕ್ಕೆ 150ರಿಂದ 200 ಮಾದರಿಗಳ ಜಿನೋಮಿಕ್ ಸಿಕ್ವೆನ್ಸೀಸ್ ಪರೀಕ್ಷೆ ಮಾತ್ರ ಸಾಧ್ಯವಾಗುತ್ತಿದೆ ಎಂದು ಪ್ರಯೋಗಾಲಯದ ಮೂಲಗಳು ತಿಳಿಸಿವೆ.

ರಾಜ್ಯದ 9 ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿ ಯಾಗಿವೆ. ಬೆಂಗಳೂರಿನಲ್ಲಿ 16,286 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ತುಮಕೂರು (2,360), ಬಳ್ಳಾರಿ (1,823), ಮೈಸೂರು (1,773), ಹಾಸನ (1,572), ಮಂಡ್ಯ (1,223), ಬೆಂಗಳೂರು ಗ್ರಾಮಾಂತರ (1,138), ಶಿವಮೊಗ್ಗ (1,125), ದಕ್ಷಿಣ ಕನ್ನಡ (1,077) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪೀಡಿತರಲ್ಲಿ ಮತ್ತೆ 34,752 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 14.40 ಲಕ್ಷಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೋವಿಡ್ ಅಂಕಿ–ಅಂಶಗಳ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT