ಸೋಮವಾರ, ಆಗಸ್ಟ್ 15, 2022
21 °C
ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ಕಣಕ್ಕೆ ಕಿರುತೆರೆಯ ರಂಗು

ಗಿರಿಸಾಗರದಲ್ಲಿ 'ಕನ್ನಡತಿ' ಧಾರವಾಹಿಯ ಖ್ಯಾತ ನಟಿ ರಂಜನಿ ರಾಘವನ್ ಝಲಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಮತದಾನ ದಿನ ಹತ್ತಿರ ಬರುತ್ತಿದಂತೆಯೇ ಪ್ರಚಾರದ ಭರಾಟೆ ಜೊರಾಗಿದೆ. ಅದಕ್ಕೀಗ  ತಾರಾ ಮೆರುಗು ಬಂದಿದೆ.

ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ದೊಡ್ಡ ಗೌರಿಯ ಪಾತ್ರಧಾರಿಯಾಗಿ ಮನೆ ಮಾತಾಗಿದ್ದ ಕಿರುತೆರೆ ನಟಿ ರಂಜನಿ ರಾಘವನ್ ಈಗ ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳ ಪರ ಪ್ರಚಾರದ ಕಣಕ್ಕೆ ಇಳಿದಿದ್ದಾರೆ.

ಈಗ ಕನ್ನಡತಿ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ರಂಜನಿ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿದ್ದರು.

ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿಜಯಲಕ್ಷ್ಮಿ ಹೂಗಾರ, ಯಂಕಪ್ಪ ನುಚ್ಚಿನ, ದುರುಗವ್ವ ಎನ್.ಮೇತ್ರಿ ಪರವಾಗಿ ಶನಿವಾರ ರಂಜನಿ ರಾಘವನ್ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಕಾರಿನಿಂದ ಇಳಿದ ಅವರನ್ನು ಅಭ್ಯರ್ಥಿಗಳಾದ ವಿಜಯಲಕ್ಷ್ಮಿ, ದುರುಗವ್ವ ಸಾಂಪ್ರದಾಯಿಕವಾಗಿ ಹೂ ನೀಡಿ, ಆರತಿ ಬೆಳಗಿ ಸ್ವಾಗತಿಸಿದರು. ನಂತರ ಮೂವರು ಅಭ್ಯರ್ಥಿಗಳ ಪರ ಕರಪತ್ರ ಹಿಡಿದುಕೊಂಡು ಮನೆ ಮನೆಗೆ ತೆರಳಿ ಮತ ಕೇಳಿದರು.


ನಟಿ ರಂಜನಿ ರಾಘವನ್‌ಗೆ ಹೂಗುಚ್ಛ ನೀಡಿ ಸ್ವಾಗತ

ದುರುಗವ್ವನ ಚಿಹ್ನೆ ಆಟೊರಿಕ್ಷಾ ಗುರುತು, ಯಂಕಪ್ಪ ಅವರ ಟ್ರ್ಯಾಕ್ಟರ್ ಓಡಿಸುವ ರೈತ ಹಾಗೂ ವಿಜಯಲಕ್ಷ್ಮಿ ಅವರ ಗುರುತು ಬ್ಯಾಟರಿ ಚಿಹ್ನೆಗೆ ಮತ ಹಾಕುವಂತೆ ಕೋರಿದರು.

ಗ್ರಾಮದ ಮುಖ್ಯರಸ್ತೆಗಳಲ್ಲಿ ಸಂಚರಿಸಿದರು. ಬಿರು ಬಿಸಿಲಿನಲ್ಲಿ ಬೆವರು ಹರಿಯದಂತೆ ತಡೆಯಲು ಹೋದಡೆಯಲ್ಲಿ ಅವರನ್ನು ಛತ್ರಿ ಛಾಮರ ಹಿಂಬಾಲಿಸಿರು. ಈ ವೇಳೆ ರಂಜಿನಿ ಅವರನ್ನು ನೋಡಲು  ಹೆಣ್ಣುಮಕ್ಕಳು, ಪುಟ್ಟ ಮಕ್ಕಳು  ಮುಗಿಬಿದ್ದರು. ಮೆರವಣಿಗೆಯಲ್ಲಿ ರಂಜಿನಿ ಅವರೊಂದಿಗೆ ತಾವೂ ಹೆಜ್ಜೆ ಹಾಕಿದರು. ಓಣಿಗಳಲ್ಲಿ ನಿಂತು, ಕಟ್ಟೆಯ ಮೇಲೆ ನಿಂತು ನೆಚ್ಚಿನ ನಟಿಯನ್ನು ಕಣ್ತುಂಬಿಕೊಂಡರು.  ಇದರಿಂದ ಕೋವಿಡ್ ಸುರಕ್ಷತೆಯ ಮಾರ್ಗಸೂಚಿ ಉಲ್ಲಂಘನೆಯಾಗಿದ್ದು, ಪ್ರಚಾರದ ಅಬ್ಬರದಲ್ಲಿ ಕಾಣಲಿಲ್ಲ.

ವಿಡಿಯೊ ಸಂದೇಶ: ಮೂವರು ಅಭ್ಯರ್ಥಿಗಳ ಪರವಾಗಿ ಗಿರಿಸಾಗರಕ್ಕೆ ಬಂದು ಪ್ರಚಾರ ಮಾಡುವುದಾಗಿ ರಂಜಿನಿ ರಾಘವನ್ ಶುಕ್ರವಾರವೇ ವಿಡಿಯೊ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಆ ಸಂದೇಶ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು. ಹೀಗಾಗಿ ರಂಜಿನಿ ನೋಡಲು ಬರೀ ಗಿರಿಸಾಗರ ಗ್ರಾಮಸ್ಥರು ಮಾತ್ರವಲ್ಲ ಹೊರಗಿನವರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು.


ಮತಯಾಚನೆ ನಡೆಸಿದ ನಟಿ ರಂಜನಿ ರಾಘವನ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು