ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತಾವರ ಕನ್ನಡ ಸಂಘದ ದತ್ತಿನಿಧಿ ಪ್ರಶಸ್ತಿ ಘೋಷಣೆ

Last Updated 31 ಡಿಸೆಂಬರ್ 2021, 18:52 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದಲ್ಲಿ ಈಚೆಗೆ ಸ್ಥಾಪಿಸಲಾಗಿರುವ ಮೂರು ದತ್ತಿ ನಿಧಿಗಳ ಪ್ರಶಸ್ತಿಗಳು ಘೋಷಣೆಯಾಗಿದ್ದು, ಧಾರವಾಡದ ಸಾಹಿತಿ ಡಾ. ಜಿ.ಎಂ.ಹೆಗಡೆ ಹೆಸರಿನ ಪ್ರಾಧ್ಯಾಪಕ, ಸಂಶೋಧಕ ಪ್ರಶಸ್ತಿಗೆ ಮುಂಬೈ ವಿ.ವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್.ಉಪಾಧ್ಯ ಆಯ್ಕೆಯಾಗಿದ್ದಾರೆ.

ರಂಗಕರ್ಮಿ ಮಂಜನಬೈಲ್ ಅವರ ಹೆಸರಿನ ರಂಗಸನ್ಮಾನ್ ಪ್ರಶಸ್ತಿಗೆ ನಾಟಕಕಾರ, ನಿರ್ದೇಶಕ ಬೇಲೂರು ರಘುನಂದನ್ ಮತ್ತು ಪತ್ರಕರ್ತ ಪಾ.ವೆಂ. ಆಚಾರ್ಯ ಹೆಸರಿನ ಪತ್ರಿಕಾ ಮಾಧ್ಯಮ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿಯು ತಲಾ ₹10,000 ನಗದು, ತಾಮ್ರಪತ್ರ, ಸನ್ಮಾನವನ್ನೊಳಗೊಂಡಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT