ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾದ 29 ಸಚಿವರು

Last Updated 4 ಆಗಸ್ಟ್ 2021, 10:50 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ 29 ಸಚಿವರ ಸೇರ್ಪಡೆಯಾಗಿದೆ.

ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಸಚಿವರನ್ನು ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂ ಗುಚ್ಛ ನೀಡಿ ಅಭಿನಂದಿಸಿದರು.

ವಿಧಾನ ಪರಿಷತ್ತಿನಿಂದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಂಟಿಬಿ ನಾಗರಾಜ್‌ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿ.ಸಿ. ನಾಗೇಶ್‌, ಶಂಕರ್ ಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್, ಮುನಿರತ್ನ ಮತ್ತು ಸುನೀಲ್ ಕುಮಾರ್ ಮೊದಲ ಬಾರಿ ಸಚಿವರಾಗಿದ್ದಾರೆ.

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು:

1. ಗೋವಿಂದ ಕಾರಜೋಳ (ಮುಧೋಳ)

2. ಕೆ.ಎಸ್‌. ಈಶ್ವರಪ್ಪ (ಶಿವಮೊಗ್ಗ ನಗರ)

3. ಆರ್‌. ಅಶೋಕ (ಪದ್ಮನಾಭ ನಗರ)

4. ಬಿ. ಶ್ರೀರಾಮುಲು (ಮೊಳಕಾಲ್ಮೂರು))

5. ವಿ. ಸೋಮಣ್ಣ (ಗೋವಿಂದರಾಜನಗರ)

6. ಉಮೇಶ ಕತ್ತಿ (ಹುಕ್ಕೇರಿ)

7. ಎಸ್‌. ಅಂಗಾರ (ಸುಳ್ಳ)

8. ಜೆ.ಸಿ. ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ)

9. ಆರಗ ಜ್ಞಾನೇಂದ್ರ (ತೀರ್ಥಹಳ್ಳಿ)

10. ಡಾ.ಸಿ.ಎನ್‌. ಅಶ್ವತ್ಥ ನಾರಾಯಣ (ಮಲ್ಲೇಶ್ವರ)

11. ಸಿ.ಸಿ. ಪಾಟೀಲ (ನರಗುಂದ)

12. ಆನಂದ ಸಿಂಗ್‌ (ಹೊಸಪೇಟೆ)

13. ಕೋಟ ಶ್ರೀನಿವಾಸ ಪೂಜಾರಿ (ವಿಧಾನ ಪರಿಷತ್ ಸದಸ್ಯ)

14. ಪ್ರಭು ಚೌವ್ಹಾಣ್ (ಔರಾದ್)

15. ಮುರುಗೇಶ ಆರ್‌. ನಿರಾಣಿ (ಬೀಳಗಿ)

16. ಶಿವರಾಮ ಹೆಬ್ಬಾರ್‌ (ಯಲ್ಲಾಪುರ)

17. ಎಸ್‌.ಟಿ. ಸೋಮಶೇಖರ್‌ (ಯಶವಂತಪುರ)

18. ಬಿ.ಸಿ. ಪಾಟೀಲ (ಹಿರೇಕೆರೂರು)

19. ಭೈರತಿ ಬಸರಾಜ್ (ಕೆ.ಆರ್‌.ಪುರಂ)

20. ಡಾ.ಕೆ. ಸುಧಾಕರ್ (ಚಿಕ್ಕಬಳ್ಳಾಪುರ)

21. ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್‌)

22. ಶಶಿಕಲಾ ಜೊಲ್ಲೆ (ನಿಪ್ಪಾಣಿ)

23. ಎಂಟಿಬಿ ನಾಗರಾಜ್ (ವಿಧಾನ ಪರಿಷತ್ ಸದಸ್ಯ)

24. ಕೆ.ಸಿ. ನಾರಾಯಣಗೌಡ (ಕೆ‌.ಆರ್. ಪೇಟೆ)

25. ಬಿ.ಸಿ. ನಾಗೇಶ್ (ತಿಪಟೂರು)

26. ವಿ. ಸುನೀಲ್ ಕುಮಾರ್ (ಕಾರ್ಕಳ)

27. ಹಾಲಪ್ಪ ಆಚಾರ್ (ಯಲಬುರ್ಗಾ)

28. ಶಂಕರ ಪಾಟೀಲ ಮುನೇನಕೊಪ್ಪ (ನವಲುಗುಂದ)

29. ಮುನಿರತ್ನ (ಆರ್‌.ಆರ್. ನಗರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT