ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಕರಿ ನಾಯಕ, ಓಬವ್ವಗೆ ಯಾವ ಪಟ್ಟಕಟ್ಟುತ್ತೀರಿ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Last Updated 11 ನವೆಂಬರ್ 2021, 8:24 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿದ್ದರಾಮಯ್ಯನವರೇ, ಹೈದರಾಲಿ ಮತ್ತು ಟಿಪ್ಪು ಅಪ್ರತಿಮ ದೇಶಪ್ರೇಮಿಗಳು ಎನ್ನುವ ನೀವು ವೀರ ವನಿತೆ ಒನಕೆ ಓಬವ್ವ ಹಾಗೂ ಚಿತ್ರದುರ್ಗದ ಮದಕರಿ ನಾಯಕರಿಗೆ ಯಾವ ಪಟ್ಟಕಟ್ಟುತ್ತೀರಿ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಟಿಪ್ಪುವನ್ನು ವೈಭವೀಕರಿಸುವ ನಿಮಗೆ ಓಬವ್ವ ಹಾಗೂ ಮದಕರಿ ನಾಯಕನ ಶೌರ್ಯ ಕಾಣಿಸುವುದಿಲ್ಲವೇ?, ನೀವು ವೈಭವೀಕರಿಸುವ ಹೈದರಾಲಿ ಮತ್ತು ಟಿಪ್ಪುವಿನ ಹೇಡಿತನ ಹಾಗೂ ಮೋಸವನ್ನು ಒನಕೆ ಓಬವ್ವ ಆ ಕಾಲದಲ್ಲೇ ಬಯಲು ಮಾಡಿದ್ದಳು. ಚಿತ್ರದುರ್ಗದ ಕೋಟೆ ರಕ್ಷಣೆಗಾಗಿ ಏಕಾಂಗಿಯಾಗಿ ಒನಕೆ ಹಿಡಿದು ಹೋರಾಡಿದ ಈ ಹೆಣ್ಣುಮಗಳ ಶೌರ್ಯಕ್ಕೂ, ಹೈದರಾಲಿ, ಟಿಪ್ಪುವಿನ‌ ಕ್ರೌರ್ಯಕ್ಕೂ ಹೋಲಿಕೆ ಸಾಧ್ಯವೇ? ಎಂದು ಪ್ರಶ್ನಿಸಿದೆ.

ಮೈಸೂರು ರಾಜರು, ಮಯೂರ, ಗಂಗರಸರು, ರಾಷ್ಟ್ರಕೂಟರು, ಹೊಯ್ಸಳರು ಮಠ-ಮಂದಿರ ಕಟ್ಟಿ ನಾಡನ್ನು ಸುಭೀಕ್ಷವಾಗಿಟ್ಟಿದ್ದನ್ನು ಏಕೆ ಮರೆ ಮಾಚುವಿರಿ ಸಿದ್ದರಾಮಯ್ಯ?, ಟಿಪ್ಪು ಜಯಂತಿಯನ್ನು ಜನ ತಿರಸ್ಕರಿಸಿದರೂ, ಮುಸ್ಲಿಂ ಸಮುದಾಯವೇ ಟಿಪ್ಪು ಜಯಂತಿಯ ಅಗತ್ಯವಿಲ್ಲವೆಂದರೂ ಟಿಪ್ಪುವನ್ನು ಆರಾಧಿಸುತ್ತಿರುವ ಮರ್ಮವೇನು? ಎಂದು ಬಿಜೆಪಿ ಕಿಡಿಕಾರಿದೆ.

'ಸಿದ್ದರಾಮಯ್ಯನವರೇ, ಇತಿಹಾಸದ ಪುಸ್ತಕ ಓದಿ, ಇತಿಹಾಸ ತಿರುಚಿದವರ ಬರಹವನ್ನಲ್ಲ. ನಿಮಗೆ ಓಲೈಕೆ ರಾಜಕಾರಣ ಮಾತ್ರ ಮುಖ್ಯ. ಹೀಗಾಗಿ ಒನಕೆ ಓಬವ್ವ ಹಾಗೂ ಮದಕರಿ ನಾಯಕರ ಜಯಂತಿಯ ಬದಲು ಟಿಪ್ಪು ಜಯಂತಿ ಆಚರಿಸಿದಿರಿ. ನೀವೊಬ್ಬ ಹಿಂದು ವಿರೋಧಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT