ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಯಾತ್ರೆ ಸುಲ್ತಾನ್ ಬತ್ತೇರಿ ಮೂಲಕ ಬಂದಿದ್ದು ಏಕೆ? ಇಲ್ಲಿದೆ ಬಿಜೆಪಿ ವಿವರಣೆ

Last Updated 30 ಸೆಪ್ಟೆಂಬರ್ 2022, 5:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ‘ಭಾರತ ಜೋಡಿಸಿ ಯಾತ್ರೆ (ಭಾರತ್‌ ಜೋಡೊ ಯಾತ್ರೆ)‘ಯು ತಮಿಳುನಾಡು, ಕೇರಳ ಸಂಚಾರ ಮುಗಿಸಿ ಇಂದು (ಸೆ. 30) ರಾಜ್ಯ ಪ್ರವೇಶ ಮಾಡಿದೆ.

ಕೇರಳದ ಸುಲ್ತಾನ್‌ ಬತ್ತೇರಿ ಮಾರ್ಗವಾಗಿ ರಾಜ್ಯ ಪ್ರವೇಶಿಸಿರುವ ಯಾತ್ರೆಯ ಹಿಂದೆ ಬೇರೆಯದ್ದೇ ಕಾರಣವಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಸಂಬಂಧ ರಾಜ್ಯ ಬಿಜೆಪಿ ಘಟಕವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊ ವಿವರಣೆಯನ್ನೂ ನೀಡಿದೆ.

‘ಟಿಪ್ಪುವಿನ ಮತಾಂಧತೆಗೆ ಹಿಂದೂಗಳ ರಕ್ತ ಹರಿದಿರುವ ನೆಲ ಸುಲ್ತಾನ್ ಬತ್ತೇರಿ. ಇಲ್ಲಿಂದಲೇ ರಾಹುಲ್ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡುತ್ತಿರುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿ’ ಎಂದು ಆ ವಿಡಿಯೊಗೆ ವಿವರಣೆಯೊಂದನ್ನು ಬಿಜೆಪಿ ನೀಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರು ಸುಮಾರು 511 ಕಿ.ಮೀಯಷ್ಟು ನಡೆಯಲಿದ್ದಾರೆ. ಒಟ್ಟು 21 ದಿನಗಳ ಕಾಲ ರಾಜ್ಯದಲ್ಲಿ ಯಾತ್ರೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT