ಬೆಂಗಳೂರು: ‘ಸಾಮ್ರಾಟ ಚಕ್ರವರ್ತಿ ಕೆಲಸವೇ ಬೇರೆ, ನನ್ನ ಕೆಲಸವೇ ಬೇರೆ. ಅಶೋಕ ಎಂದು ಅವರ ಅಪ್ಪ, ಅಮ್ಮ ಏಕೆ ಹೆಸರಿಟ್ಟರೋ ಗೊತ್ತಿಲ್ಲ. ಸಾಮ್ರಾಟನಂತೆ ಆಡುತ್ತಾನೆ. ನನಗೆ ದುರಹಂಕಾರ ಇಲ್ಲ, ಪಕ್ಷವೇ ಮುಖ್ಯ. ಈಗ ಇರುವುದು ಕೋವಿಡ್ ನಿರ್ವಹಣೆಯ ಉಸ್ತುವಾರಿ ಮಾತ್ರ. ಅಶೋಕ ಹೇಗೆ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರೇ ಕೇಳಬೇಕು’ ಎಂದು ವಿ. ಸೋಮಣ್ಣ ಹೇಳಿದರು.

‘ನಾನು ಸಚಿವನಾಗಿದ್ದಾಗ ಅಶೋಕ ಇನ್ನೂ ಶಾಸಕ. ನಾನಿನ್ನೂ ಬೆಂಝ್ ಕಾರಿನಂತೆ ಗಟ್ಟಿಯಾಗಿದ್ದೇನೆ. ಉಸ್ತುವಾರಿ ನೀಡಿದರೆ ಅತ್ಯುತ್ತಮವಾಗಿ ನಿಭಾಯಿಸುವೆ. ಉಸ್ತುವಾರಿ ಸಚಿವರ ವಿಷಯ ಮೂರು– ನಾಲ್ಕು ದಿನಗಳಲ್ಲಿ ಗೊತ್ತಾಗಲಿದೆ. ಅಶೋಕ ಅವರಿಗಾ? ನನಗಾ? ಅಥವಾ ಇಬ್ಬರು ಉಸ್ತುವಾರಿ ಸಚಿವರನ್ನು ಮಾಡುತ್ತಾರಾ’ ಎಂದು ಸ್ಪಷ್ಟವಾಗಲಿದೆ ಎಂದು ಹೇಳಿದರು.

‘ನಾನು ಕರೆದಿದ್ದ ಸಭೆಗೆ ಅಶೋಕ ಬಂದಿರಲಿಲ್ಲ. ಆದರೆ, ಅಶೋಕ ಸಭೆ ಕರೆದರೆ ನಾನು ಹೋಗುವೆ. ಸಭೆಗೆ ಬರದಿದ್ದರೆ ಅವರಿಗೇ ನಷ್ಟ’ ಎಂದರು.

‘ಬೆಂಗಳೂರು ನಗರದ ಉಸ್ತುವಾರಿಯನ್ನು ಯಾರಿಗಾದರೂ ನೀಡಲಿ. ಮುಖ್ಯಮಂತ್ರಿಯವರ ಬಳಿಯೇ ಇದ್ದರೆ ನಮ್ಮ ಅಭ್ಯಂತರ ಇಲ್ಲ. ಆದರೆ, ಬೇರೆಯವರಿಗೆ ನೀಡುವುದಾದರೆ ಹಿರಿತನದ ಆಧಾರದಲ್ಲಿ ನಿರ್ಧಾರ ಮಾಡಬೇಕು. ನನ್ನನ್ನೂ ಪರಿಗಣಿಸಿ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಳಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.