ನೀರು ಪ್ರಕೃತಿಯನ್ನು ಸಲಹುತ್ತಿರುವ ನೈಸರ್ಗಿಕ ಸಂಪತ್ತು. ನೈಸರ್ಗಿಕವಾಗಿ ಹರಿಯುವ ನೀರು ಅನೇಕ ಸುಂದರ ಜಲಪಾತಗಳನ್ನು ಸೃಷ್ಟಿಸಿವೆ. ಪ್ರಪಂಚದ 5 ಅತೀ ಎತ್ತರದ ಜಲಪಾತಗಳು ಯಾವುವು ಎಂಬುದನ್ನು ತಿಳಿಯೋಣ.

ಏಂಜೆಲ್ಸ್ ಜಲಪಾತ :

ವಿಶ್ವದ ಅತಿ ಎತ್ತರದ ಜಲಪಾತವೆಂಬ ಖ್ಯಾತಿ ಪಡೆದಿರುವ ‘ಏಂಜೆಲ್ಸ್ ಜಲಪಾತ’ ದಕ್ಷಿಣ ಅಮೆರಿಕಾದ ವೆನೆಜುವೆಲಾದಲ್ಲಿದೆ. ಈ ಜಲಪಾತ ತನ್ನ ಸುಂದರ ಅರಿವು ಹಾಗೂ ಎತ್ತರದಿಂದ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತದೆ. 3,212 ಅಡಿ ಎತ್ತರದಿಂದ ‘ಚುರುನ್ ನದಿ’ಯು ಏಂಜೆಲ್ಸ್ ಜಲಪಾತವಾಗಿ ಧುಮ್ಮಿಕ್ಕುತ್ತದೆ.

ದಟ್ಟ ಕಾಡಿನ ನಡುವೆ ಇರುವ ಈ ಜಲಪಾತಕ್ಕೆ ಜೂನ್ ನಿಂದ ಡಿಸೆಂಬರ್ ನಡುವಿನ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಟುಗ್ಲೆ ಜಲಪಾತ:

ದಕ್ಷಿಣ ಆಫ್ರಿಕಾದಲ್ಲಿರುವ ಟುಗ್ಲೆ ಜಲಪಾತ ವಿಶ್ವದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲಿರುವ ರಾಯಲ್ ನಟಲ್ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿದೆ. ಈ ಜಲಪಾತದ ವಿಶೇಷತೆ ಎಂದರೆ 3,110 ಅಡಿಗಳಿಂದ 5 ಹಂತಗಳಲ್ಲಿ ದುಮುಕ್ಕುತ್ತದೆ.

ಟುಗ್ಲೆ ನದಿಯು ಕಾಡಿನ ನಡುವೆ ನುಸುಳುತ್ತ ಕ್ವಾಜುಲು-ನಟಾಲ್ನಲ್ಲಿ ಟುಗ್ಲೆ ಜಲಪಾತವಾಗಿ ಧುಮ್ಮಿಕ್ಕುತ್ತದೆ.

ಟ್ರೆಸ್ ಹರ್ಮನಾಸ್:

ವಿಶ್ವದ ಮೂರನೇ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟ್ರೆಸ್ ಹರ್ಮನಾಸ್ ಜಲಪಾತ ಪೆರುವಿನ ಒಟಿಶಿ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇದನ್ನು ‘ತ್ರೀ ಸಿಸ್ಟರ್ಸ್ ಫಾಲ್ಸ್’ ಎಂದೂ ಕರೆಯಲಾಗುತ್ತದೆ. ಇದರ ಎತ್ತರ 2,999 ಅಡಿಗಳಾಗಿದೆ.

ಮಳೆಕಾಡಿನಲ್ಲಿ ಸುರಿಯುವ ಅಧಿಕ ಮಳೆಯಿಂದಾಗಿ ಮೈದುಂಬಿ ಹರಿಯುವ ಟ್ರೆಸ್ ಹರ್ಮನಾಸ್ ಜಲಪಾತಕ್ಕೆ ಭೇಟಿ ನೀಡುವುದು ಸಹಸಮಯವಾಗಿದೆ. ದುರ್ಗಮ ಮಳೆ ಕಾಡಿನ ನಡುವೆ ಸಾಗಿ ಈ ಜಲಪಾತವನ್ನು ತಲುಪಬೇಕು.

ಓಲೋ ಉಪೆನಾ ಜಲಪಾತ:

ಅಮೆರಿಕಾದ ಹವಾಯಿಯಲ್ಲಿನ ಮೊಲೊಕೈ ದ್ವೀಪದಲ್ಲಿ ಓಲೋಉಪೆನಾ ಜಲಪಾತವಿದೆ. ಇದು ವಿಶ್ವದ 4ನೇ ಅತಿ ಎತ್ತರದ ಜಲಪಾತ ಎಂಬ ಖ್ಯಾತಿ ಪಡೆದಿದೆ. ಸುಮಾರು 2,953 ಅಡಿಗಳಷ್ಟು ಎತ್ತರದಿಂದ ಹಾಲೋಕು ಕ್ಲಿಫ್ಸ್ನ ಬದಿಯಲ್ಲಿ ಈ ಜಲಪಾತ ಧುಮುಕುತ್ತದೆ.

ವಿಶ್ವದಲ್ಲಿಯೇ ಸಮುದ್ರ ಮಟ್ಟದಿಂದ ಎತ್ತರವಾಗಿರುವ ಬಂಡೆಗಳಲ್ಲಿ ಒಂದಾದ ಹಾಲೋಕು ಕ್ಲಿಫ್ಸ್ನ ಬದಿಯಿಂದ ಬೀಳುವುದು ವಿಶೇಷವಾಗಿದೆ. ಈ ಜಲಪಾತವನ್ನು ಆಕಾಶದಲ್ಲಿ ಯಾನ ಮಾಡಿಕೊಂಡು ಅಥವಾ ಸಮುದ್ರದಿಂದ ಮಾತ್ರ ನೋಡಬಹುದು. ಇದರ ಬಳಿ ಹೋಗಲು ನಿಷೇಧವಿದೆ.

ಯುಂಬಿಲ್ಲಾ ಜಲಪಾತ:

ಉತ್ತರ ಪೆರುವಿನ ಅಮೆಜಾನ್ ಪ್ರದೇಶದ ಕ್ಯೂಸ್ಪೇಸ್ ಸಮೀಪದಲ್ಲಿರುವ ಯುಂಬಿಲ್ಲಾ ಜಲಪಾತವು ವಿಶ್ವದ 5ನೇ ಅತಿ ಎತ್ತರದ ಜಲಪಾತವಾಗಿದೆ. ಸುತ್ತಲು ಹಚ್ಚ ಹಸಿರಿನಿಂದ ಕೂಡಿದ ಪ್ರದೇಶದ ಮಧ್ಯೆ ಸೌಮ್ಯವಾಗಿ ಧುಮ್ಮಿಕ್ಕುತ್ತದೆ. ಚಾರಣ ಮಾಡುವವರಿಗೆ ಈ ಸ್ಥಳವು ಅದ್ಬುತ ಅನುಭವ ನೀಡುತ್ತದೆ.

2,938 ಅಡಿ ಎತ್ತರವಿದೆ ಎಂದು ಹೇಳಿದರೂ ಇದರ ಎತ್ತರದ ಬಗ್ಗೆ ಸಾಕಷ್ಟು ವಿವಾದಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.